
ಕೂಡ್ಲಿಗಿ, 14 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಟಿ. ಕಲ್ಲಹಳ್ಳಿ,ಮಾಳೇಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ 7.30ರ ಸುಮಾರಿಗೆ ಭೂಮಿ ಕಂಪಿಸಿ, ಮನೆಯಲ್ಲಿದ್ದ ಪಾತ್ರೆಗಳು ಅಲುಗಾಡಿ - ಚೆಲ್ಲಾಪಿಲ್ಲಿಯಾದ ವರದಿಯಾಗಿದೆ.
ಅಲ್ಲದೇ, ಈ ಗ್ರಾಮದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮನಲ್ಲನ ಹೊಳೆ, ಚಿತ್ರದುರ್ಗ ಜಿಲ್ಲೆಯ ತೊರೆ ಕೊಲಮ್ಮನ ಹಳ್ಳಿಯಲ್ಲಿಯೂ ಭೂಮಿ ಕಂಪಿಸಿ ಮನೆಯಲ್ಲಿದ್ದ ಪಾತ್ರೆಗಳು ಅಲುಗಾಡಿದ ವರದಿಗಳು ಕೇಳಿಬರುತ್ತಿವೆ.
ಭೂಮಿಯ ಕ್ಷಣಕಾಲದ ಕಂಪನದಿಂದಾಗಿ ಪಾತ್ರೆಗಳು ಅಲುಗಾಡಿ ಬಿದ್ದಾಗ ಉಂಟಾದ ಸದ್ದಿನಿಂದ ಜನರು ಆತಂಕದಿಂದ ಮನೆಗಳಿಂದ ಹೊರಗಡೆ ಓಡಿ ಬಂದಿದ್ದಾರೆ ಎನ್ನಲಾಗಿದೆ.
ಆದರೆ, ಈ ಕುರಿತು ಯಾವುದೇ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಿಲ್ಲ. ಯಾವುದೇ ಅನಾಹುತವಾಗಿಲ್ಲ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್