ಕೋಲ್ಕತ್ತಾದಲ್ಲಿ ಮೆಸ್ಸಿಗೆ ಭರ್ಜರಿ ಸ್ವಾಗತ
ಕೋಲ್ಕತ್ತಾ, 13 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಶುಕ್ರವಾರ ತಡರಾತ್ರಿ ಕೋಲ್ಕತ್ತಾಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಸಾವಿರಾರು ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಶನಿವಾರ ಬೆಳಿಗ್ಗೆ ಹೌರಾ ಸೇತುವೆ
Messi


ಕೋಲ್ಕತ್ತಾ, 13 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಶುಕ್ರವಾರ ತಡರಾತ್ರಿ ಕೋಲ್ಕತ್ತಾಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಸಾವಿರಾರು ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು.

ಶನಿವಾರ ಬೆಳಿಗ್ಗೆ ಹೌರಾ ಸೇತುವೆಯಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಮೆಸ್ಸಿ ಯುವ ಭಾರತಿ ಕ್ರೀಡಾಂಗಣಕ್ಕೆ ತೆರಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ “ಮೆಸ್ಸಿ ಆಲ್ ಸ್ಟಾರ್ಸ್ vs ಡೈಮಂಡ್ ಹಾರ್ಬರ್ ಆಲ್ ಸ್ಟಾರ್ಸ್” ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ಯುವ ಆಟಗಾರರೊಂದಿಗೆ ‘ಮಾಸ್ಟರ್ ಕ್ಲಾಸ್’ ಅಧಿವೇಶನವೂ ನಡೆಯಲಿದೆ.

ಕೋಲ್ಕತ್ತಾದ ನಂತರ ಮೆಸ್ಸಿ ಹೈದರಾಬಾದ್, ಮುಂಬೈ ಮತ್ತು ದೆಹಲಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande