
ನವದೆಹಲಿ, 13 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸೋಮವಾರ ಬೋರ್ನ್‌ಮೌತ್ ವಿರುದ್ಧ ನಡೆಯಲಿರುವ ಪ್ರೀಮಿಯರ್ ಲೀಗ್ ಹೋಮ್ ಪುಟ್ಬಾಲ್ ಪಂದ್ಯಕ್ಕೂ ಮುನ್ನ ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಬ್ರಿಯಾನ್ ಎಂಬೆಮೊ, ನೌಸೇರ್ ಮಜ್ರೌಯಿ ಮತ್ತು ಅಮದ್ ಡಿಯಲ್ಲೊ ಅವರ ಲಭ್ಯತೆ ಕುರಿತು ಅನಿಶ್ಚಿತತೆಯಲ್ಲಿದೆ.
ಡಿಸೆಂಬರ್ 21ರಿಂದ ಆರಂಭವಾಗುವ ಆಫ್ರಿಕಾ ಕಪ್ ಆಫ್ ನೇಷನ್ಸ್ ಹಿನ್ನೆಲೆಯಲ್ಲಿ ಆಟಗಾರರನ್ನು ರಾಷ್ಟ್ರೀಯ ತಂಡಗಳಿಗೆ ಬಿಡುಗಡೆ ಮಾಡುವ ದಿನಾಂಕದ ಗೊಂದಲ ಇದಕ್ಕೆ ಕಾರಣವಾಗಿದೆ.
ಮ್ಯಾನೇಜರ್ ರೂಬೆನ್ ಅಮೋರಿಮ್, “ನಾವು ಪ್ರತಿಯೊಂದು ಪರಿಸ್ಥಿತಿಗೂ ತಯಾರಾಗಿದ್ದೇವೆ. ಆಟಗಾರರು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಅಥವಾ ನಾಳೆ ಅಂತಿಮ ನಿರ್ಧಾರವಾಗುವ ನಿರೀಕ್ಷೆ ಇದೆ” ಎಂದು ಹೇಳಿದರು.
ಗಾಯಗಳಿಂದಲೂ ಯುನೈಟೆಡ್ ಸಂಕಷ್ಟದಲ್ಲಿದೆ. ಡಿಫೆಂಡರ್‌ಗಳಾದ ಹ್ಯಾರಿ ಮ್ಯಾಗೈರ್ ಮತ್ತು ಮ್ಯಾಥಿಜ್ಸ್ ಡಿ ಲಿಗ್ಟ್ ಹೊರಗುಳಿದಿದ್ದು, ಸ್ಟ್ರೈಕರ್ ಬೆಂಜಮಿನ್ ಶೆಷ್ಕೊ ಲಭ್ಯತೆ ಇನ್ನೂ ಅನುಮಾನದಲ್ಲಿದೆ.
15 ಪಂದ್ಯಗಳಲ್ಲಿ 25 ಅಂಕಗಳೊಂದಿಗೆ ಯುನೈಟೆಡ್ ಆರನೇ ಸ್ಥಾನದಲ್ಲಿದ್ದು, ಬೋರ್ನ್‌ಮೌತ್ 20 ಅಂಕಗಳೊಂದಿಗೆ 13ನೇ ಸ್ಥಾನದಲ್ಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa