
ರಾಯಚೂರು, 11 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ತಾಲೂಕಿನ ಗಿಲ್ಲೇಸೂಗೂರು ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳ ವಿವರ: ಗಿಲ್ಲೇಸೂಗೂರು ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಜಾಗೀರ ವೆಂಕಟಪೂರು ಗ್ರಾಮ ಪಂಚಾಯತಿಯ ಸುಲ್ತಾನಪೂರು ಕೇಂದ್ರ-1ಕ್ಕೆ ಎಸ್.ಸಿ., ಜೇಗರಕಲ್ ಗ್ರಾಮ ಪಂಚಾಯತಿಯ ಜಿ.ತಿಮ್ಮಾಪೂರು ಕೇಂದ್ರ-2ಕ್ಕೆ ಎಸ್.ಸಿ., ಬಾಯಿದೊಡ್ಡಿ ಗ್ರಾಮ ಪಂಚಾಯತಿಯ ಕುರುಬದೊಡ್ಡಿ ಕೇಂದ್ರ-2ಕ್ಕೆ ಎಸ್.ಸಿ., ತಲ್ಮಾರಿ ಕೇಂದ್ರ-4ಕ್ಕೆ ಇತರೆ, ದೇವಸೂಗೂರು ಗ್ರಾಮ ಪಂಚಾಯತಿಯ ಶಕ್ತಿನಗರ ಕೇಂದ್ರ-2ಕ್ಕೆ ಇತರೆ, ಮಟಮಾರಿ ಕೇಂದ್ರ-1ಕ್ಕೆ ಇತರೆ, ರಾಯಚೂರಿನ ಮಹಾನಗರ ಪಾಲಿಕೆಯ ವಾರ್ಡ ನಂ-35ರ ಕಸ್ಬೆಕ್ಯಾಂಪ್ ಕೇಂದ್ರ-1ಕ್ಕೆ ಇತರೆ, ಮಹಾನಗರ ಪಾಲಿಕೆ ರಾಯಚೂರು ವಾರ್ಡ ನಂ.34ರ ಯಕ್ಲಾಸಪೂರು ಕೇಂದ್ರ-1ಕ್ಕೆ ಇತರೆ, ಯದ್ಲಾಪೂರು ಕೇಂದ್ರ-4ಕ್ಕೆ ಇತರೆ, ಯದ್ಲಾಪೂರು ಗ್ರಾಮ ಪಂಚಾಯತಿಯ ವಡ್ಲೂರು ಕೇಂದ್ರ-2ಕ್ಕೆ ಇತರೆ, ಗಂಜಳ್ಳಿ ಕೇಂದ್ರ-1ಕ್ಕೆ ಇತರೆ, ಸಗಮಕುಂಟ ಕೇಂದ್ರ-1ಕ್ಕೆ ಇತರೆ, ಕಮಲಾಪೂರು ಗ್ರಾಮ ಪಂಚಾಯತಿಯ ಗಧಾರ ಕೇಂದ್ರಕ್ಕೆ ಇತರೆ ಮೀಸಲು ನಿಗದಿಪಡಿಸಲಾಗಿದೆ.
ಅಂಗನವಾಡಿ ಸಹಾಯಕಿಯರ ಹುದ್ದೆಗಳ ವಿವರ: ಗಿಲ್ಲೇಸೂಗೂರು ಕ್ಯಾಂಪ್ ಕೇಂದ್ರ-3ಕ್ಕೆ ಎಸ್.ಸಿ., ದೇವಸೂಗೂರು ಕೇಂದ್ರ-5ಕ್ಕೆ ಎಸ್.ಸಿ, ಪೂರತಿಪ್ಲಿ ಗ್ರಾಮ ಪಂಚಾಯತಿಯ ಆಲ್ಕೂರು ಕೇಂದ್ರ-2ಕ್ಕೆ ಎಸ್.ಸಿ., ಬಾಯಿದೊಡ್ಡಿ ಗ್ರಾಮ ಪಂಚಾಯತಿಯ ಗೌಸನಗರ ಕೇಂದ್ರಕ್ಕೆ ಎಸ್.ಸಿ., ರಾಯಚೂರು ಮಹಾನಗರ ಪಾಲಿಕೆಯ ವಾರ್ಡ್ ನಂ.34ರ ಅಸ್ಕಿಹಾಳ ಕೇಂದ್ರ-2ಕ್ಕೆ ಎಸ್.ಸಿ., ಎಲ್.ಕೆ.ದೊಡ್ಡಿ ಗ್ರಾಮ ಪಂಚಾಯತಿಯ ಮಾಸದೊಡ್ಡಿ ಕೇಂದ್ರ-3ಕ್ಕೆ ಎಸ್.ಟಿ., ಪೂರತಿಪ್ಲಿ ಗ್ರಾಮ ಪಂಚಾಯತಿಯ ತುರಕಣಡೋಣ ಕೇಂದ್ರ-2ಕ್ಕೆ ಎಸ್.ಟಿ, ಗುಂಜಳ್ಳಿ ಕೇಂದ್ರ-6ಕ್ಕೆ ಎಸ್.ಟಿ., ಮಿಟ್ಟಿಮಲ್ಕಾಪೂರು ಗ್ರಾಮ ಪಂಚಾಯತಿಯ ಹೊಸಮಲಿಯಾಬಾದ್ ಕೇಂದ್ರ-3ಕ್ಕೆ ಎಸ್.ಟಿ., ಹಳೆಮಲಿಯಾಬಾದ್ ಕೇಂದ್ರ-1ಕ್ಕೆ ಎಸ್.ಟಿ., ಯಾಪಲದಿನ್ನಿ ಗ್ರಾಮ ಪಂಚಾಯತಿಯ ನಾಗನದೊಡ್ಡಿ ಕೇಂದ್ರ-1ಕ್ಕೆ ಎಸ್.ಟಿ, ಮಟಮಾರಿ ಕೇಂದ್ರ-4ಕ್ಕೆ ಎಸ್.ಟಿ., ಕಾಡ್ಲೂರು ಗ್ರಾಮ ಪಂಚಾಯತಿಯ ಅರಶಿಣಿಗಿ ಕೇಂದ್ರ-3ಕ್ಕೆ ಇತರೆ, ಗಾಣಧಾಳ ಗ್ರಾಮ ಪಂಚಾಯತಿಯ ಬುಳ್ಳಾಪೂರು ಕೇಂದ್ರ-2ಕ್ಕೆ ಇತರೆ, ಎಲ್.ಕೆ.ದೊಡ್ಡಿ ಗ್ರಾಮ ಪಂಚಾಯತಿಯ ತುಂಟಾಪೂರು ಕೇಂದ್ರ-1ಕ್ಕೆ ಇತರೆ, ದೇವಸೂಗೂರು ಗ್ರಾಮ ಪಂಚಾಯತಿಯ ಶಕ್ತಿನಗರ ಕೇಂದ್ರ-1ಕ್ಕೆ ಇತರೆ, ಬಾಯಿದೊಡ್ಡಿ ಕೇಂದ್ರ-1ಕ್ಕೆ ಇತರೆ, ಬಿಜನಗೇರಾ ಗ್ರಾಮ ಪಂಚಾಯತಿಯ ಬೋಳಮಾನದೊಡ್ಡಿ ಕೇಂದ್ರಕ್ಕೆ ಇತರೆ, ಬಿಜನಗೇರಾ ಗ್ರಾಮ ಪಂಚಾಯತಿಯ ರಾಜಲಬಂಡ ಕೇಂದ್ರ-2ಕ್ಕೆ ಇತರೆ, ಮನ್ಸಲಾಪೂರು ಗ್ರಾಮ ಪಂಚಾಯತಿಯ ಹೊಸಪೇಟೆ ಕೇಂದ್ರ-1ಕ್ಕೆ ಇತರೆ, ಮಿಟ್ಟಿಮಲ್ಕಾಪೂರು ಕೇಂದ್ರ-2ಕ್ಕೆ ಇತರೆ, ಯದ್ಲಾಪೂರು ಕೇಂದ್ರ-1ಕ್ಕೆ ಇತರೆ, ಯದ್ಲಾಪೂರು ಕೇಂದ್ರ-4ಕ್ಕೆ ಇತರೆ, ಯದ್ಲಾಪೂರು ಗ್ರಾಮ ಪಂಚಾಯತಿಯ ವಡ್ಲೂರು ಕೇಂದ್ರ-1ಕ್ಕೆ ಇತರೆ, ವಡ್ಲೂರು ಕೇಂದ್ರ-2ಕ್ಕೆ ಇತರೆ, ಶಾಖವಾದಿ ಗ್ರಾಮ ಪಂಚಾಯತಿಯ ಕೂಡ್ಲೂರು ಕೇಂದ್ರ-1ಕ್ಕೆ ಇತರೆ, ಕಮಲಾಪೂರು ಗ್ರಾಮ ಪಂಚಾಯತಿಯ ಗಧಾರ್ ಕೇಂದ್ರ-2ಕ್ಕೆ ಇತರೆ, ರಾಯಚೂರು ಮಹಾನಗರ ಪಾಲಿಕೆಯ ವಾರ್ಡ ನಂ.33ರ ಯರಮರಸ್ ಕೇಂದ್ರ-2ಕ್ಕೆ ಇತರೆ, ರಾಯಚೂರಿನ ಮಹಾನಗರ ಪಾಲಿಕೆಯ ವಾರ್ಡ ನಂ.35ರ ಕಸ್ಬೆಕ್ಯಾಂಪ್ ಕೇಂದ್ರ-2ಕ್ಕೆ ಇತರೆ ಮೀಸಲು ನಿಗದಿಪಡಿಸಿದ್ದು, ಆಸಕ್ತರು ಜನವರಿ 7 ರೊಳಗಾಗಿ ಆನ್‌ಲೈನ್ ವಿಳಾಸ: https://karnemakaone.kar.nic.in/abcd/ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಅಪೂರ್ಣ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಗಿಲ್ಲೇಸೂಗೂರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಾರ್ಯಾಲಯ ಕಚೇರಿಯ ಸಮಯದಲ್ಲಿ ಸಂಪರ್ಕಿಸುವ0ತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್