ಶಾಸಕರ ವಿರುದ್ಧ ದೂರು ದಾಖಲು
ಗದಗ, 11 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಜೆಪಿ ಕಾರ್ಯಕರ್ತ ಹಾಗೂ ಚನ್ನಪಟ್ಟಣ ಗ್ರಾಮದ ನಿವಾಸಿ ನಾಮದೇವ ಮಾಂಡ್ರೆ ಅವರು ಶಾಸಕರ ವಿರುದ್ಧ ಜೀವಬೆದರಿಕೆ, ಅವಾಚ್ಯ ನಿಂದನೆ ಹಾಗೂ ಧಮ್ಕಿ ಆರೋಪಿಸಿ ಶಿರಹಟ್ಟಿ ಪ
ಫೋಟೋ


ಫೋಟೋ


ಗದಗ, 11 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಜೆಪಿ ಕಾರ್ಯಕರ್ತ ಹಾಗೂ ಚನ್ನಪಟ್ಟಣ ಗ್ರಾಮದ ನಿವಾಸಿ ನಾಮದೇವ ಮಾಂಡ್ರೆ ಅವರು ಶಾಸಕರ ವಿರುದ್ಧ ಜೀವಬೆದರಿಕೆ, ಅವಾಚ್ಯ ನಿಂದನೆ ಹಾಗೂ ಧಮ್ಕಿ ಆರೋಪಿಸಿ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.

ದೂರುದಾರ ನಾಮದೇವ ಮಾಂಡ್ರೆ ನೀಡಿರುವ ಮಾಹಿತಿಯಂತೆ, ಕೆಲವು ವೈಯಕ್ತಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿ–ರಿಪೋರ್ಟ್ ಹಾಕಿಸಿಕೊಡುವ ವಿಷಯದ ಮೇಲೆ ಅವರು ಶಾಸಕರನ್ನು ಸಂಪರ್ಕಿಸಿದ್ದರು. ಈ ವೇಳೆ ನಡೆದ ಫೋನ್ ಸಂಭಾಷಣೆಯಲ್ಲಿ ಶಾಸಕ ಲಮಾಣಿ ಏಕವಚನದಲ್ಲಿ ಮಾತಾಡಿ, ಹೀನಪದಗಳಿಂದ ಬೈದು, “ಎಲ್ಲಿದ್ದೀಯ… ಮನೆಗೆ ಬರುತ್ತೀನಿ… ಯಾಕ ಲೇ ಜಾತಿ ಮಾತಾಡ್ತೀಯಾ?” ಎಂದು ಗರಂ ಆಗಿದ್ದು, ಬೆದರಿಕೆ ಹಾಕಿರುವ ಆಡಿಯೋ ರೆಕಾರ್ಡ್ ಸಹ ತನ್ನ ಬಳಿ ಇದೆ ಎಂದು ತಿಳಿಸಿದ್ದಾರೆ.

ಶಾಸಕರ ಬೆಂಬಲಿಗರ ಸಮ್ಮುಖದಲ್ಲೂ ತಮ್ಮನ್ನು ನಿಂದನೆ ಮಾಡಿರುವುದಾಗಿ ಮಾಂಡ್ರೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. “ನನಗೆ ಶಾಸಕರಿಂದ ಜೀವ ಬೆದರಿಕೆ ಇದೆ. ನಮ್ಮ ಕುಟುಂಬಕ್ಕೆ ಏನಾದರೂ ಆದರೆ ಶಾಸಕ ಚಂದ್ರು ಲಮಾಣಿಯೇ ಹೊಣೆ” ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಕುರಿತಂತೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಶಾಸಕರು ಸೇರಿದಂತೆ ನಾಲ್ವರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಾರಂಭವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande