
ನವದೆಹಲಿ, 11 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜನವರಿ 15ರಿಂದ ಫೆ. 6ರವರೆಗೆ ನಮೀಬಿಯಾ–ಜಿಂಬಾಬ್ವೆಯಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡವನ್ನು ಘೋಷಿಸಲಾಗಿದೆ. ಯುವ ಬ್ಯಾಟ್ಸ್‌ಮನ್ ಆಲಿವರ್ ಪೀಕ್ ತಂಡವನ್ನು ಮುನ್ನಡೆಸಲಿದ್ದಾರೆ. ಎರಡನೇ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಪೀಕ್, ಶೆಫೀಲ್ಡ್ ಶೀಲ್ಡ್‌ನಲ್ಲೂ ಗಮನ ಸೆಳೆದಿದ್ದಾರೆ.
ಆಸ್ಟ್ರೇಲಿಯಾ ಐರ್ಲೆಂಡ್, ಜಪಾನ್, ಶ್ರೀಲಂಕಾ ತಂಡಗಳೊಂದಿಗೆ ಪ್ರಾಥಮಿಕ ಗುಂಪಿನಲ್ಲಿ ಸೇರಿದೆ. 16 ತಂಡಗಳ ಟೂರ್ನಿಯಲ್ಲಿ ಪ್ರತೀ ಗುಂಪಿನ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್‌ಗೆ ಪ್ರವೇಶಿಸಲಿವೆ.
ಈ ಬಾರಿ ತಂಡಕ್ಕೆ ನಿತೇಶ್ ಸ್ಯಾಮ್ಯುಯೆಲ್, ನದೀನ್ ಕೂರೆ, ವಿಲಿಯಂ ಟೇಲರ್ ಎಂಬ ಮೂವರು ಹೊಸ ಆಟಗಾರರು ಸೇರ್ಪಡೆಯಾಗಿದ್ದಾರೆ. ಇತ್ತೀಚಿನ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುನ್ನತ ಪ್ರದರ್ಶನ ನೀಡಿದ ಸ್ಯಾಮ್ಯುಯೆಲ್ 364 ರನ್‌ಗಳೊಂದಿಗೆ ಟೂರ್ನಿಯ ಶ್ರೇಷ್ಠ ಆಟಗಾರರಾಗಿದ್ದರು.
ಟಿಮ್ ನೀಲ್ಸನ್ ಮುಖ್ಯ ತರಬೇತುದಾರರಾಗಿದ್ದು, ಪಡೆ ಅನುಭವ–ಹೊಸ ಪ್ರತಿಭೆಗಳ ಸಮತೋಲನ ಹೊಂದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಆಸ್ಟ್ರೇಲಿಯಾ ಅಂಡರ್-19 ತಂಡ: ಆಲಿವರ್ ಪೀಕ್ (ನಾಯಕ), ಕೇಸಿ ಬಾರ್ಟನ್, ನದೀನ್ ಕೂರೆ, ಜೇಡನ್ ಡ್ರೇಪರ್, ಸ್ಟೀವನ್ ಹೋಗನ್, ಥಾಮಸ್ ಹೋಗನ್, ಬೆನ್ ಗಾರ್ಡನ್, ಜಾನ್ ಜೇಮ್ಸ್, ಚಾರ್ಲ್ಸ್ ಲ್ಯಾಕ್ಮಂಡ್, ಅಲೆಕ್ಸ್ ಲೀ-ಯಂಗ್, ವಿಲ್ ಮಲಾಜ್ಚುಕ್, ನಿತೇಶ್ ಸ್ಯಾಮ್ಯುಯೆಲ್, ಹೇಡನ್ ಶಿಲ್ಲರ್, ಆರ್ಯನ್ ಶರ್ಮಾ, ವಿಲಿಯಂ ಟೇಲರ್.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa