ಕೋಲಾರತಾಲ್ಲೂಕು ಮಟ್ಟದ ಶಿಕ್ಷಕರ ಸಹಪಠ್ಯಚಟುವಟಿಕೆಗಳ ಸ್ಪರ್ಧೆ
ಕೋಲಾರತಾಲ್ಲೂಕು ಮಟ್ಟದ ಶಿಕ್ಷಕರ ಸಹಪಠ್ಯಚಟುವಟಿಕೆಗಳ ಸ್ಪರ್ಧೆ
ಚಿತ್ರ ; ಕೋಲಾರದ ಮೆಥೋಡಿಸ್ಟ್ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಿಗೆ ಬಿಇಒ ಉಮಾ ಚಾಲನೆ ನೀಡಿದರು.


ಕೋಲಾರ, ೧೦ ಡಿಸೆಂಬರ್(ಹಿ.ಸ) :

ಆ್ಯಂಕರ್ : ಶಿಕ್ಷಕರು ತಮ್ಮಲ್ಲಿನ ಒತ್ತಡ, ಜಂಜಾಟದಿಂದ ಹೊರ ಬಂದು ಕಲಿಕಾ ಪುನಶ್ವೇತನಕ್ಕೆ ಸಹಪಠ್ಯ ಚಟುವಟಿಕೆಗಳು ಸಹಕಾರಿಯಾಗಿದ್ದು, ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಶಿಕ್ಷಣ ಸಂಯೋಜಕಿ ಹಾಗೂ ಸ್ಪರ್ಧೆಗಳ ನೋಡಲ್ ಅಧಿಕಾರಿ ಎಂ.ಎಂ.ರಾಧಾ ಅಭಿಪ್ರಾಯಪಟ್ಟರು.

ನಗರದ ಮೆಥೋಡಿಸ್ಟ್ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ತಾಲ್ಲೂಕು ಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಮಕ್ಕಳಲ್ಲಿ ಕಲಿಕಾಸಕ್ತಿ ಬೆಳೆಸುವ ಕಾಯಕದ ಒತ್ತಡದಲ್ಲೇ ಸದಾ ಮಗ್ನರಾಗಿರುವ ಶಿಕ್ಷಕರ ಪ್ರತಿಭಾ ಪ್ರದರ್ಶನಕ್ಕೆ ಸಹಪಠ್ಯ ಚಟುವಟಿಕೆ ಉತ್ತಮ ವೇದಿಕೆಯಾಗಿದೆ, ಇಲ್ಲಿ ಹೊರ ಬರುವ ಪ್ರತಿಭೆಗೆ ಪುರಸ್ಕಾರ ಸಿಗುತ್ತದೆ ಆದರೆ ಅದೇ ಪ್ರತಿಭೆಯನ್ನು ಮಕ್ಕಳಿಗೆ ನೀವು ಧಾರೆಯೆರೆದಾಗ ಸಿಗುವ ಸಂತೃಪ್ತಿ ಹೆಚ್ಚಿನದು ಎಂದರು.

ಜಿಲ್ಲಾ ಬಡ್ತಿ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಮಕ್ಕಳಂತೆ ಶಿಕ್ಷಕರಿಗೂ ಸ್ಪರ್ಧೆಗಳ ಆಯೋಜನೆ ಹೆಚ್ಚು ಪರಿಣಾಮಕಾರಿಯಾಗಿದೆ, ಶಿಕ್ಷಕರಲ್ಲೂ ಮತ್ತಷ್ಟು ಕಲಿಯುವ ಆಸಕ್ತಿ ಹೆಚ್ಚಿಸುವ ಮೂಲಕ ಅವರ ಬೋಧನೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಕಾರ್ಯದರ್ಶಿ ಗಂಗಾಧರಮೂರ್ತಿ ಮಾತನಾಡಿ, ಸದಾ ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ಪ್ರಯತ್ನಿಸುವ ಶಿಕ್ಷಕರಿಗೆ ಇದೀಗ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಸಿಕ್ಕಿದೆ, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇಸಿಒ ನಂಜುಂಡಗೌಡ ವಂದಿಸಿ, ಮಕ್ಕಳಿಗಾಗಿ ಪ್ರತಿಭಾ ಕಾರಂಜಿ ಸಾಮಾನ್ಯ ಅದರೆ ಈಗ ನಡೆಯುತ್ತಿರುವುದು ಶಿಕ್ಷಕರ ಪ್ರತಿಭಾ ಕಾರಂಜಿ, ಇಲ್ಲಿ ನಿಮ್ಮಲ್ಲಿ ಅಡಗಿರುವ ಪ್ರತಿಭೆ ಕಾರಂಜಿಯಾಗಿ ಹೊರ ಬರಬೇಕು, ಅದಕ್ಕೆ ಪುರಸ್ಕಾರ ಸಿಗಲಿದೆ ಎಂದರು.

ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಆನಂದಕುಮಾರ್, ಗಂಗಾಧರಮೂರ್ತಿ,ಎನ್.ಎಸ್.ಭಾಗ್ಯ, ಎಸ್.ರಾಘವೇಂದ್ರ,ಕಾಳಿದಾಸ್, ಬಿ.ವಾಣಿ, ಎಂ.ರಮೇಶ್, ಕೆ.ವಿ.ರತ್ನಮ್ಮ, ನಾಗರಾಜ್ ಮತ್ತಿತರರು ಕಾರ್ಯನಿರ್ವಹಿಸಿದರು.

ಸಿಆರ್‌ಪಿ ಟಿ.ಎಂ.ಸುರೇಶ್‌ಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಇಸಿಒಗಳಾದ ಕೆ.ಶ್ರೀನಿವಾಸ್,ನಾಗರಾಜ್, ಮಂಜುನಾಥ್, ತಾಲ್ಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸತೀಶ್ ಕುಮಾರ್, ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಸುರೇಶ್‌ಕುಮಾರ್,ಇಂಚರ ನಾರಾಯಣಸ್ವಾಮಿ ಮತ್ತಿತರರಿದ್ದು, ಶಿಕ್ಷಕಿ ಸುಗುಣಾ ಪ್ರಾರ್ಥಿಸಿದರು.

ಸಾಮಾನ್ಯ ರಸಪ್ರಶ್ನೆ-ಸಿ.ಎಲ್.ಶ್ರೀನಿವಾಸಲು ಸರ್ಕಾರಿ ಪ್ರೌಢಶಾಲೆ ಅರಾಭಿಕೊತ್ತನೂರು, ಆಶುಭಾಷಣ - ಕೆ ನಾರಾಯಣರೆಡ್ಡಿ

ಸಹ ಶಿಕ್ಷಕರು ನೂತನ ಸರ್ಕಾರಿ ಪ್ರೌಢಶಾಲೆ ಕೋಲಾರ, ಭಕ್ತಿಗೀತೆ-ಅಶ್ವಿನಿ ಗಾಂವ್ಕರ್ ಶಿಕ್ಷಕರು ಮುರಾರ್ಜಿ ದೇಸಾಯಿ ಪ್ರೌಢಶಾಲೆ ಮದನಹಳ್ಳಿ, ಸ್ಥಳದಲ್ಲಿ ಪಾಠೋಪಕರಣ ತಯಾರಿಕೆ-ಚಂದ್ರಶೇಖರ್ ವೈ.ಸಿ. ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಹುತ್ತೂರು, ವಿಜ್ಞಾನ ರಸ ಪ್ರಶ್ನೆ-ಮುಜಾಹಿದ್ ಪಾಷಾ ಸರ್ಕಾರಿ ಪ್ರೌಢಶಾಲೆ ಬೆಳಮಾರನಹಳ್ಳಿ, ಪ್ರಬಂಧ-ಎಂ.ಎನ್.ವಿಶ್ವನಾಥ್ ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ನಾಯಕರಹಳ್ಳಿ ಹಾಗೂ ಚಿತ್ರಕಲೆ-ನಾರಾಯಣಸ್ವಾಮಿ ಸರ್ಕಾರಿ ಪ್ರೌಢಶಾಲೆ ತೊರದೇವಂಡಹಳ್ಳಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

ಆಶುಭಾಷಣ- ಶ್ರೀನಿವಾಸ ಎಂ.ಎನ್. ಸಹ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆ ಶಾನುಭೋಗನಹಳ್ಳಿ, ಭಕ್ತಿಗೀತೆ-ವರಲಕ್ಷ್ಮಮ್ಮ ಸರ್ಕಾರಿ ಶಾಲೆ ದೊಡ್ಡಹಸಾಳ, ಸ್ಥಳದಲ್ಲಿ ಪೀಠೋಪಕರಣ ತಯಾರಿಕೆ - ಮುನಿರಾಜು ಸಿ.ಸಹ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆ ಐತರಸನಹಳ್ಳಿ, ವಿಜ್ಞಾನ ರಸ ಪ್ರಶ್ನೆ -ಎಂ.ಚಂದ್ರಶೇಖರ್ ಸಹ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆ ಕುರಗಲ್, ಸಾಮಾನ್ಯ ರಸಪ್ರಶ್ನೆ-ಸುಮಿತ್ರ ಸಹಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆ ಮಣಿಘಟ್ಟ, ಪ್ರಬಂಧ-ಮಂಜುಳಾ ಕುತುಬ್ ಶಹಿಂಶನಗರ್ ಸರ್ಕಾರಿ ಶಾಲೆ ಕೋಲಾರ, ಚಿತ್ರಕಲೆ-ಮಂಜುನಾಥಕುಮಾರ್ ಸಹ ಶಿಕ್ಷಕರು, ಸರ್ಕಾರಿ ಶಾಲೆ ಗರುಡನಹಳ್ಳಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಚಿತ್ರ ; ಕೋಲಾರದ ಮೆಥೋಡಿಸ್ಟ್ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಿಗೆ ಬಿಇಒ ಉಮಾ ಚಾಲನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande