
ಕೋಲಾರ, ೧೦ ಡಿಸೆಂಬರ್(ಹಿ.ಸ) :
ಆ್ಯಂಕರ್ : ತಾಲೂಕಿನ ಸುಗಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ೨೦೨೬ ವರ್ಷದ ಕ್ಯಾಲೆಂಡರ್ ಬಿಡುಗಡೆಯು ಬುಧವಾರ ಸೊಸೈಟಿಯ ಮುಂಭಾಗ ನಡೆಯಿತು.
ಸೊಸೈಟಿ ಅಧ್ಯಕ್ಷ ಎ.ಸಿ ಭಾಸ್ಕರ್ ಬಾಬು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ ಸುಗಟೂರು ಸೊಸೈಟಿಯು ಸಹಕಾರಿಗಳಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ ರೈತಾಪಿ ವರ್ಗದವರಿಗೆ ಗುಣಮಟ್ಟದ ಸೇವೆ, ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ರೈತರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿ ಹೊಸಬರಿಗೆ ಸಾಲ ಕೊಡಲು ಸಹಕರಿಸಬೇಕು ಹೋಬಳಿಯ ಪ್ರತಿಯೊಂದು ಕುಟುಂಬಕ್ಕೂ ಕ್ಯಾಲೆಂಡರ್ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ವಿ.ಎನ್ ವಿಜಯಕುಮಾರ್, ನಿರ್ದೇಶಕರಾದ ವೆಂಕಟರಾಮರೆಡ್ಡಿ, ಟಿ.ವಿ ಕೃಷ್ಣಪ್ಪ, ಡಿ.ಗೋಪಾಲಪ್ಪ, ಎ.ಎನ್ ಹನುಮೇಗೌಡ, ಎಂ.ಎನ್ ಶಂಕರರೆಡ್ಡಿ, ಜೆ ಗೋಪಾಲಕೃಷ್ಣ, ಮುನಿವೆಂಕಟಪ್ಪ, ಸವಿತಾ ನಾಗೇಂದ್ರಶೆಟ್ಟಿ, ಶ್ಯಾಮಲಾ ರಮೇಶ್, ಎ.ಜಿ ರಮೇಶ್ ಬಾಬು, ಸೈಯದ್ ಸಿರಾಜ್, ಎಸ್.ಆರ್ ನಾರಾಯಣಸ್ವಾಮಿ, ಗೋಪಾಲಗೌಡ, ಸಿಇಒ ಎಂ ಪುಟ್ಟುರಾಜು, ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು
ಚಿತ್ರ ; ಕೋಲಾರ ತಾಲೂಕಿನ ಸುಗಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ೨೦೨೬ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್