ನಿಮ್ಮ ಬಂಡವಾಳ, ನಿಮ್ಮ ಹಕ್ಕುಗಳು ಅಭಿಯಾನಕ್ಕೆ ಸೇರಲು ಪ್ರಧಾನಿ ಮನವಿ
ನವದೆಹಲಿ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೇಶದಾದ್ಯಂತ ಮರೆತು ಹೋದ ಮತ್ತು ಹಕ್ಕು ಪಡೆಯದ ಹಣಕಾಸು ಸಂಪನ್ಮೂಲಗಳನ್ನು ನಾಗರಿಕರು ಮರುಪಡೆಯಲು ಸಾಧ್ಯವಾಗುವಂತೆ ಸರ್ಕಾರ ಆರಂಭಿಸಿರುವ ನಿಮ್ಮ ಬಂಡವಾಳ, ನಿಮ್ಮ ಹಕ್ಕುಗಳು ಅಭಿಯಾನಕ್ಕೆ ಸಾರ್ವಜನಿಕರು ಸಕ್ರಿಯವಾಗಿ ಸೇರುವಂತೆ ಪ್ರಧಾನ ಮಂತ್ರಿ ನರೇಂದ್ರ
Pm


ನವದೆಹಲಿ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೇಶದಾದ್ಯಂತ ಮರೆತು ಹೋದ ಮತ್ತು ಹಕ್ಕು ಪಡೆಯದ ಹಣಕಾಸು ಸಂಪನ್ಮೂಲಗಳನ್ನು ನಾಗರಿಕರು ಮರುಪಡೆಯಲು ಸಾಧ್ಯವಾಗುವಂತೆ ಸರ್ಕಾರ ಆರಂಭಿಸಿರುವ ನಿಮ್ಮ ಬಂಡವಾಳ, ನಿಮ್ಮ ಹಕ್ಕುಗಳು ಅಭಿಯಾನಕ್ಕೆ ಸಾರ್ವಜನಿಕರು ಸಕ್ರಿಯವಾಗಿ ಸೇರುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಪ್ರಧಾನಿ ಬುಧವಾರ ಎಕ್ಸ ಖಾತೆಯಲ್ಲಿ ಪ್ರಕಟಿಸಿದ ಲಿಂಕ್ಡ್‌ಇನ್‌ ಬ್ಲಾಗ್ ಪೋಸ್ಟ್‌ನಲ್ಲಿ, ನಿಮ್ಮ ಮರೆತುಹೋದ ಆರ್ಥಿಕ ಸಂಪನ್ಮೂಲಗಳನ್ನು ಹೊಸ ಅವಕಾಶಗಳಾಗಿ ಪರಿವರ್ತಿಸಲು ಇದು ಸೂಕ್ತ ಅವಕಾಶ. ಈ ಉಪಕ್ರಮಕ್ಕೆ ಸೇರಿ ಎಂದು ಮನವಿ ಮಾಡಿದ್ದಾರೆ.

ಈ ಅಭಿಯಾನದ ಮೂಲಕ ದೇಶಾದ್ಯಂತ ಕೋಟ್ಯಂತರ ರೂಪಾಯಿಗಳಷ್ಟು ಉಳಿದಿರುವ ಕ್ಲೇಮ್‌ ಮಾಡದ ಬ್ಯಾಂಕ್ ಠೇವಣಿಗಳು, ವಿಮಾ ಪಾವತಿಗಳು, ಲಾಭಾಂಶಗಳು ಮತ್ತು ಇತರೆ ಹಣಕಾಸು ಸ್ವತ್ತುಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಹಣಕಾಸು ಸಂಸ್ಥೆಗಳ ಪ್ರಕಾರ, ಅನೇಕ ಖಾತೆಗಳು ಮತ್ತು ಹೂಡಿಕೆಗಳು ವರ್ಷಗಳಿಂದ ಹಕ್ಕು ಪಡೆಯದೇ ಉಳಿದ ಪಾವತಿಗಳನ್ನು ಹೊಂದಿವೆ. ಈಗ ಸರ್ಕಾರ ರೂಪಿಸಿರುವ ಸರಳ ಮತ್ತು ಏಕೀಕೃತ ಪ್ರಕ್ರಿಯೆ ಮೂಲಕ ಜನರು ತಮ್ಮ ಹೆಸರುಗಳಿಗೆ ಸಂಬಂಧಿಸಿದ ಹಕ್ಕುಗಳನ್ನು ಸುಲಭವಾಗಿ ಮರುಪಡೆದುಕೊಳ್ಳಬಹುದಾಗಿದೆ.

ಈ ಅಭಿಯಾನವು ಸಾರ್ವಜನಿಕರಿಗೆ ಅವರ ಹಣಕಾಸು ಹಕ್ಕುಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಮೂಲಕ ಜಾಗೃತಿ ಮತ್ತು ಹಕ್ಕುಪಡೆಯುವಿಕೆಯನ್ನು ವೇಗಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande