
ಗಂಗಾವತಿ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಮೂರು ದಿನಗಳ ಕಾಲ ವೈಜ್ಞಾನಿಕ ಸಮ್ಮೇಳನವು ಡಿಸೆಂಬರ್ 28,29 ಮತ್ತು 30 ರಂದು ನಡೆಯಲಿದೆ ಎಂದು ಪರಿಷತ್ ಕೊಪ್ಪಳ ಜಿಲ್ಲಾಧ್ಯಕ್ಷ ಲಿಂಗರೆಡ್ಡಿ ಆಲೂರು ಅವರು ತಿಳಿಸಿದ್ದಾರೆ.
ಸದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಗಂಗಾವತಿಯ ಲಿಟಲ್ ಹಾಟ್ರ್ಸ ಶಾಲೆಯ ಜಗನ್ನಾಥ ಆಲಂಪಲ್ಲಿ ಇವರಿಗೆ ಹೆಚ್. ನರಸಿಂಹಯ್ಯ ಪ್ರಶಸ್ತಿ ಹಾಗು ಕೊಲ್ಲಿ ಕಾಲೇಜು ಉಪನ್ಯಾಸಕಿ ಮಮ್ತಾಜ್ ಬೇಗಂ ಇವರಿಗೆ ಚೈತನ್ಯ ಶ್ರೀ ಪ್ರಶಸ್ತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರತಿ ವರ್ಷ ರಾಜ್ಯದ ಸುಮಾರು 30ಕ್ಕು ಹೆಚ್ಚು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು ಈ ಬಾರಿ ಕೊಪ್ಪಳ ಜಿಲ್ಲೆಯ ಶೈಕ್ಷಣಿಕ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಯುವ ಸಮುದಾಯದಲ್ಲಿ ವೈಜ್ಞಾನಿಕತೆ ಬೆಳೆಸುವ ನಿಟ್ಟಿನಲ್ಲಿ ಸುಮಾರು 40 ಸಾವಿರ ಮಕ್ಕಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರಕಾರ, ಮಾನವ ಬಂಧುತ್ವ ವೇದಿಕೆ, ಯಾದಗಿರಿ ಪ್ರಗತಿಪರ ಸಂಘಟನೆಗಳು, ಇಸ್ರೋ ಭಾರತ ಸರಕಾರ ಬೆಂಗಳೂರು ಕರ್ನಾಟಕ, ಜವಾಹರಲಾಲ್ ನೆಹರು ತಾರಾಲಯ ಬೆಂಗಳೂರು, ಭಾರತ ವಾಯುಪಡೆ ಬೆಂಗಳೂರು, ವಿಶ್ವೇಶ್ವರರಯ್ಯ ಕೈಗಾರಿಕಾ ಹಾಗು ಮ್ಯೂಸಿಯಂ ಬೆಂಗಳೂರು, ಮೊಬೈಲ್ ಪ್ಲಾನಿಟೋರಿಯಂ ಕೆ ಸೈಪ್ಸ್ ಹಾಗು ನ್ಯಾಷನಲ್ ಏರೋನಾಟಿಕಲ್ಸ್ ಲ್ಯಾನೋರೋಟರಿ ಡಿ.ಆರ್,ಡಿ.ಓ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನಾ ಉದ್ಘಾಟಿಸಲಿದ್ದಾರೆ. ಪವಾಡ ಬಯಲು ಕಾರ್ಯಕ್ರಮದ ರೋವಾರಿ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜ್, ಜಸ್ಟೀಸ್ ನಾಗಮೋಹನ್ ದಾಸ್, ಡಾ. ಕಿರಣ್ ಕುಮಾರ್, ಕಮಲ್ ಕುಮಾರ್, ಆರತಿ ಚೌದ್ರಿ, ಎಸ್.ಕೆ. ಉಮೇಶ್, ವೈ.ಎನ್. ಶಂಕರಗೌಡ, ತಿಪಟೂರು ವೈದ್ಯ ಡಾ. ಶ್ರೀಧರ, ಶ್ರೀರಾಮಚಂದ್ರ, ಡಾ. ಓಂಕಾರ್ ನಾಯ್ಡು, ಅನಂತ ನಾಯ್ಕ, ಡಾ. ಲೀಲಾ ಸಿಂಪಿಗೆ, ಭರಮಣ್ಣ ಕೋಳಿ, ಜೀವನ್ ಮಾಂಜ್ರೇಕರ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಸಾಹಿತಿ ಹಾಗು ಪರಿಷತ್ತಿನ ನಿರ್ದೇಶಕ ಪವನ್ ಕುಮಾರ್ ಗುಂಡೂರು ಪ್ರಶಸ್ತಿ ಪುರಸ್ಕøತರ ಪರಿಚಯ ಮಾಡಿಕೊಂಡರು.
ಪರಿಷತ್ತಿನ ಕೊಪ್ಪಳ ಜಿಲ್ಲಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ ಪೂಲಬಾವಿ, ನಿರ್ದೇಶಕರಾದ ಇಬ್ರಾಹಿಂ ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್