ಸುಸ್ಥಿರ ಸಮಾಜ ಪತ್ರಕರ್ತರ ಹೊಣೆ- ಬಸವರಾಜಸ್ವಾಮಿ
ರಾಯಚೂರು, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸುಸ್ಥಿರ ಸಮಾಜ ನಿರ್ಮಾಣಕ್ಕೆ ಪತ್ರಕರ್ತರ ಜೊತೆ ಜನಸಾಮಾನ್ಯರು ಕೈಜೋಡಿಸಬೇಕು ಎಂದು `ಸುದ್ದಿಮೂಲ’ ದಿನಪತ್ರಿಕೆಯ ಸಂಪಾದಕರಾದ ಬಸವರಾಜಸ್ವಾಮಿ ಅವರು ತಿಳಿಸಿದ್ದಾರೆ. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ಸಭಾಂಗಣದಲ್ಲಿ ಪತ್ರಿಕೋದ್ಯಮ ವಿಭಾಗ ಬ
ಸುಸ್ಥಿರ ಸಮಾಜ ಪತ್ರಕರ್ತರ ಹೊಣೆ- ಬಸವರಾಜಸ್ವಾಮಿ


ಸುಸ್ಥಿರ ಸಮಾಜ ಪತ್ರಕರ್ತರ ಹೊಣೆ- ಬಸವರಾಜಸ್ವಾಮಿ


ರಾಯಚೂರು, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸುಸ್ಥಿರ ಸಮಾಜ ನಿರ್ಮಾಣಕ್ಕೆ ಪತ್ರಕರ್ತರ ಜೊತೆ ಜನಸಾಮಾನ್ಯರು ಕೈಜೋಡಿಸಬೇಕು ಎಂದು `ಸುದ್ದಿಮೂಲ’ ದಿನಪತ್ರಿಕೆಯ ಸಂಪಾದಕರಾದ ಬಸವರಾಜಸ್ವಾಮಿ ಅವರು ತಿಳಿಸಿದ್ದಾರೆ.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ಸಭಾಂಗಣದಲ್ಲಿ ಪತ್ರಿಕೋದ್ಯಮ ವಿಭಾಗ ಬುಧವಾರ ಹಮ್ಮಿಕೊಂಡಿದ್ದ `ಮೀಡಿಯಾ ಸರ್ಕಲ್’ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಪದವಿ ಅಥವಾ ಪತ್ರಿಕೋದ್ಯಮ ಪದವಿ ಪಡೆದು ಪತಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಬಹುದು. ಆದರೆ ಪದವಿ ಜೊತೆಗೆ ಜ್ಞಾನಾರ್ಜನೆ ಮುಖ್ಯ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಓದುವಿಕೆಗೆ ಹಾಗೂ ಪರಿಶ್ರಮಕ್ಕೆ ಮುಂದಾಗಬೇಕು ಎಂದರು.

ಒಬ್ಬ ಪರಿಣಿತ ಪತ್ರಕರ್ತನಿಗೆ ಎಲ್ಲಾ ವಿಷಯಗಳ ಕುರಿತು ತಿಳುವಳಿಕೆ ಇರಬೇಕು. ಸಾಹಿತ್ಯಾಸಕ್ತರು ಪದವಿ ಪಡೆಯದೇ ಪತ್ರಕರ್ತರಾಗಿರುವ ನಿದರ್ಶನಗಳಿವೆ. ಆದರೆ ಈಗ ಪತ್ರಿಕೋದ್ಯಮ ಪದವಿಯನ್ನು ಓದಿದರೂ ಉತ್ತಮ ತರಬೇತಿ ಪಡೆಯದೇ ಆ ಕ್ಷೇತ್ರದಲ್ಲಿ ಸಾಗಲಾಗುತ್ತಿಲ್ಲ ಎಂದರು.

ವಾಲ್ಮೀಕಿ ವಿವಿಯ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಅವರು ಅಧ್ಯಕ್ಷತೆ ವಹಿಸಿ, ಸಾಹಿತ್ಯ ಹಾಗೂ ಮಾಧ್ಯಮ ವಿಷಯ ಕುರಿತು ಮಾತನಾಡಿ ದೇಶವನ್ನು ಕಟ್ಟುವುದು, ಕೆಡುವುದು, ಸರ್ಕಾರವನ್ನು ನಿರ್ಮಿಸುವುದು ಇಳಿಸುವುದು ಬಲವಾಗಿ ಬಿತ್ತರಗೊಳ್ಳುವ ಪತ್ರಿಕಾರಂಗ. ಸಾಹಿತ್ಯ ಅಂತರಂಗದೆಡೆ, ಮಾಧ್ಯಮ ಬಹಿರಂಗದೆಡೆ ಎಂದರು.

ಉಪಕುಲಸಚಿವರಾದ ಡಾ. ಕೆ. ವೆಂಕಟೇಶ ಅವರು, ಪತ್ರಿಕೋದ್ಯಮ ಮತ್ತು ಅಂಬೇಡ್ಕರ ವಿಷಯ ಕುರಿತು ಉಪನ್ಯಾಸ ನೀಡುತ್ತ - ಪತ್ರಿಕೋದ್ಯಮವನ್ನು ಸಾಮಾಜಿಕ ಪರಿವರ್ತನೆ ಮತ್ತು ದಲಿತ ಹಕ್ಕುಗಳ ರಕಣೆಗಾಗಿ ಒಂದು ಪ್ರಬಲ ಸಾಧನವಾಗಿ ಬಳಸಿದವರು ಡಾ. ಬಿ. ಆರ್. ಅಂಬೇಡ್ಕರರವರು ಎಂದರು.

ಮುಖ್ಯ ಅತಿಥಿಯಾಗಿ ವಾಲ್ಮೀಕಿ ವಿವಿಯ ಕುಲಸಚಿವರಾದ ಡಾ.ಎ.ಚನ್ನಪ್ಪÀ ಅವರು, ಪತ್ರಕರ್ತರಿಗೆ ಯಾವುದೇ ಸಂಗತಿಯನ್ನು ಬಿತ್ತರಿಸಲು ಸತ್ಯವನ್ನು ಸತ್ಯ ಸುಳ್ಳನ್ನು ಸುಳ್ಳು ಎಂದು ಹೇಳಲು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಮೂಹ ಎಂದರೆ ಜಗತ್ತು ಯಾವ ವಿಷಯವನ್ನು ಸುದ್ದಿಯನ್ನು ನಾವು ಸಮೂಹದಲ್ಲಿ ಬಿತ್ತರಿಸುತ್ತೇವೆಯೋ ಅದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಂತಿರಬೇಕು ಎಂದರು.

ಪತ್ರಿಕೋದ್ಯಮ ವಿಭಾಗದ ಕೃಷ್ಣಾತುಂಗಾ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ವೇದಿಕೆ ಮೇಲೆ ವಿಭಾಗದ ಮುಖ್ಯಸ್ಥರಾದ ಡಾ.ಲತಾ ಎಂ.ಎಸ್, ಡೀನರಾದ ಪ್ರೊ.ಪಾವರ್ತಿ ಸಿ.ಎಸ್, ಪ್ರೊ.ಪಿ.ಭಾಸ್ಕರ್, ಸಿಡಿಸಿ ನಿರ್ದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ, ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ, ಹಾಗೂ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಡಾ.ಗೀತಮ್ಮ, ಡಾ.ಪ್ರಭಾ ಬಸವರಾಜ ಸ್ವಾಮಿ, ವಿವಿಧ ವಿಭಾಗಗಳ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಡಾ.ಟಿ.ಎಸ್.ಗೊರವ ಪ್ರಾಸ್ತವಿಕವಾಗಿ ಮಾತನಾಡಿದರು. ಗಣಿತ ವಿಭಾಗದ ವಿದ್ಯಾರ್ಥಿನಿ ರೂಪಶ್ರೀ ಪ್ರಾರ್ಥಿಸಿದರು, ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಲಿಂಗರಾಜು ಸ್ವಾಗತಿಸಿದರು, ಆರ್.ವಿದ್ಯಾಸಾಗರ ನಿರೂಪಿಸಿದರು, ತನುಜಾ ಅತಿಥಿಯನ್ನು ಪರಿಚಯಿಸಿದರು, ವಿಶ್ವನಾಥ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande