
ರಾಯಚೂರು, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಕಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೂರು ಗ್ರಾಮದ ಸ.ನಂ 350/2 ವಿಸ್ತೀರ್ಣ 1 ಎಕರೆ ಜಮೀನಿನಲ್ಲಿ ವಾಸದ ಉದ್ದೇಶಕ್ಕೆ ಭೂಪರಿವರ್ತನೆಯಾಗಿ ವಿನ್ಯಾಸ ಅನುಮೋದಿತ ಬಡಾವಣೆಯಲ್ಲಿನ ನಾಗರಿಕ ಸೌಲಭ್ಯಕ್ಕಾಗಿ 352 ಚ.ಮೀ ವಿಸ್ತೀರ್ಣದ ನಿವೇಶನವನ್ನು ಕಾಯ್ದಿರಿಸಿದೆ.
ಈ ನಿವೇಶನವನ್ನು ನಾಡ ಕಾರ್ಯಾಲಯ ಕಲ್ಲೂರು ಇದರ ನೂತನ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆಗೆ ಹಸ್ತಾಂತರಿಸಲು ದಿನಾಂಕ 07-11-2025 ರಂದು ನಡೆದ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನೀರ್ಣಯಿಸಲಾಗಿದ್ದು, ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇದ್ದಲ್ಲಿ 08 ದಿನದೊಳಗಾಗಿ ಸೂಕ್ತ ಸಮರ್ಥನಿಯ ದಾಖಲೆಗಳೊಂದಿಗೆ ಲಿಖಿತವಾಗಿ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ.
ಅವಧಿ ಮೀರಿ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವದಿಲ್ಲ ಎಂದು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್