
ರಾಯಚೂರು, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಮಗ್ರ ಶಿಕ್ಷಣ ಇಲಾಖೆಯಿಂದ 2025-26ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಸಮನ್ವಯ ಶಿಕ್ಷಣ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ಖಾಲಿ ಇರುವ ಒಟ್ಟು 03 ಪ್ರಾಥಮಿಕ ವಿಭಾಗ ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರ ಹುದ್ದೆಗಳಿಗೆ ನೇರಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಆರ್‌ಸಿಐ ಅನುಮೋದಿತ ಸಂಸ್ಥೆಯಿ0ದ ಆರ್‌ಸಿಐ ಸಿಆರ್‌ಆರ್ ಸಂಖ್ಯೆಯೊAದಿಗೆ ವಿಶೇಷ ಶಿಕ್ಷಣದಲ್ಲಿ ಡಿ.ಎಡ್ ಅಥವಾ ಆರ್‌ಸಿಐ ಅನುಮೋದಿತ ಸಂಸ್ಥೆಯಿ0ದ ಆರ್‌ಸಿಐ ಸಿಆರ್‌ಆರ್ ಸಂಖ್ಯೆಯೊ0ದಿಗೆ ವಿಶೇಷ ಶಿಕ್ಷಣದಲ್ಲಿ ಡಿ.ಎಡ್‌ಗೆ ಸಮನಾದ ಡಿ.ಇಐ.ಎಡ್. ಅಂತರ್ಗತ ಶಿಕ್ಷಣದಲ್ಲಿ ಅಡ್ಡ ಅಂಗವೈಕಲ್ಯ ಪ್ರದೇಶದಲ್ಲಿ ಬೋಧನೆಯ ಆರು ತಿಂಗಳ ತರಬೇತಿ ಪಡೆದ ಆಸಕ್ತರು ಅರ್ಜಿಯನ್ನು ಡಿಸೆಂಬರ್ 19ರೊಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಸಮಗ್ರ ಶಿಕ್ಷಣ ಕರ್ನಾಟಕ ಕೂಠಡಿ ಸಂಖ್ಯೆ ಸಿ-11, ಸಿ-12 ಬ್ಲಾಕ್ ನೆಲಮಹಡಿ, ನೂತನ ಜಿಲ್ಲಾಡಳಿತ ಭವನ, ಯಕ್ಷಾಸವೂರ ರಾಯಚೂರು-584104ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್