


ಸಿರುಗುಪ್ಪ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಆಲಾಪ ಸಂಗೀತ ಕಲಾ ಟ್ರಸ್ಟ್ ನಡವಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ `ಆಲಾಪ ನಾಟಕೋತ್ಸವ’ದ ಅಂಗವಾಗಿ ವಿವಿಧ ಸಾಂಸ್ಕøತಿಕ ಚಟುವಟಿಕೆಗಳನ್ನು - ನಾಟಕಗಳನ್ನು ಪ್ರದರ್ಶನ ಮಾಡಿ, ಶಿಕ್ಷಕರನ್ನು ಸನ್ಮಾನಿಸಿತು.
ವಿಜ್ಞಾನ ಶಿಕ್ಷಕ ಶಶಿಧರ್ ಅವರು, ವಸತಿ ಶಾಲೆಯಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುವುದರ ಮೂಲಕ ಜೀವನದ ಸತ್ಯಾಂಶ ವಿದ್ಯಾರ್ಥಿಗಳಿಗೆ ತಿಳಿಯುತ್ತದೆ. ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ವಿಭಿನ್ನ ಚಿಂತನೆಗೆ ಅವಕಾಶ ಸಿಗಲಿದೆ ಎಂದರು.
ರಂಗ ನಿರ್ದೇಶಕರಾದ ಸಿರಿಗೇರಿ ಮಂಜುನಾಥ ಅವರ ನೇತೃತ್ವದ ತಂಡವು `ಸಂಸಾರದಲ್ಲಿ ಸ ನಿ ದ ಪ’ ನಾಟಕ ಪ್ರದರ್ಶನಗೊಂಡಿತು.
ಆಲಾಪ್ ಸಂಗೀತ ಕಲಾ ಟ್ರಸ್ಟ್ ನ ಅಧ್ಯಕ್ಷರಾದ ರಮಣಪ್ಪ ಭಜಂತ್ರಿ, ಶಾಲೆಯ ಸಿಬ್ಬಂದಿ ಸಂತೋμï, ಸುಪುತ್ರ. ಜಿ, ಶಶಿಧರ್.ಹೆಚ್, ತಿಪ್ಪಣ್ಣ.ಜೆ, ಪಿ.ಸಿ.ಬಸವರಾಜ್, ನಂದಿನಿ.ಪಿ, ಹೊನ್ನೂರಪ್ಪ. ಎಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್