ಕೊಪ್ಪಳ : ಸಂಗೀತ ಸಂಚಾರ
ಕೊಪ್ಪಳ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾಗ್ಯನಗರದ ಶ್ರೀ ಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆಯು ಹನುಮನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ `ಸಂಗೀತ ಸಂಚಾರ’ವನ್ನು ಹಮ್ಮಿಕೊಂಡಿತ್ತು. ಶಾಲೆಯ ಮುಖ್ಯೋಪಾಧ್ಯಾಯರಾದ ಗವಿಸಿದ್ದಪ್ಪ ತಳವಾರ ಅವರು ಕಾರ್ಯಕ್ರಮದ ಅಧ್
ಕೊಪ್ಪಳ :  ಸಂಗೀತ ಸಂಚಾರ


ಕೊಪ್ಪಳ :  ಸಂಗೀತ ಸಂಚಾರ


ಕೊಪ್ಪಳ :  ಸಂಗೀತ ಸಂಚಾರ


ಕೊಪ್ಪಳ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾಗ್ಯನಗರದ ಶ್ರೀ ಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆಯು ಹನುಮನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ `ಸಂಗೀತ ಸಂಚಾರ’ವನ್ನು ಹಮ್ಮಿಕೊಂಡಿತ್ತು.

ಶಾಲೆಯ ಮುಖ್ಯೋಪಾಧ್ಯಾಯರಾದ ಗವಿಸಿದ್ದಪ್ಪ ತಳವಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಾಟಕ ಮತ್ತು ರಂಗಭೂಮಿಯು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು - ಸೃಜನಶೀಲತೆಯನ್ನು ಪ್ರೋತ್ಸಾಹಿಸುತ್ತದೆ ಎಂದರು.

ಎಸ್‍ಡಿಎಂಸಿ ಅಧ್ಯಕ್ಷ ನಾಗಪ್ಪ ಹೊಸಳ್ಳಿ, ಉಪಾಧ್ಯಕ್ಷ ಯಡಿಯಪ್ಪ ಭೋವಿ, ಯಮನೂರಪ್ಪ ಕುಟಗನಹಳ್ಳಿ, ವೀರಣ್ಣ, ಸುಧಾಕರ ಬಗನಾಳ ಅವರು ಮುಖ್ಯ ಅತಿಥಿಗಳಾಗಿದ್ದರು.

ಸಂಗೀತ ಶಿಕ್ಷಕರಾದ ಮಾರುತಿ ಬಿನ್ಹಾಳ ಅವರು ಅತಿಥಿಗಳಾಗಿ ಮಾತನಾಡಿದರು.

ಶ್ರೀಮತಿ ವಿಜಯಲಕ್ಷ್ಮೀ ಮ್ಯಾಗಡೆ ಅವರಿಂದ ವಚನ ಮತ್ತು ಮೀರಾ ಬಜೆನ್ ಗಾಯನ, ಕು. ವೈದೇಹಿ ವ್ಯಾಸಮುದ್ರಿ ಕೊಪ್ಪಳ ಅವರಿಂದ ಭಾವಗೀತೆ, ಪರಶುರಾಮ ದಲಬಂಜನ ಭಾಗ್ಯನಗರ ಅವರಿಂದ ಜಾನಪದ ಗೀತೆ, ಬಾಲಾಜಿ ಅವರಿಂದ ಸುಗಮ ಸಂಗೀತ ನೆರವೇರಿತು.

ವಾದ್ಯ ಸಹಕಾರ : ಕೀಬೋರ್ಡ್ - ಶ್ರೀರಾಮಚಂದ್ರಪ್ಪ ಉಪ್ಪಾರ, ತಬಲಾ : ಮಾರುತಿ ಬಿನ್ಹಾಳ ಸಂಗೀತ ಶಿಕ್ಷಕರು ರಿದಂಪ್ಯಾಡ : ಸಂಜನ ಬೆಲ್ಲದ ಕೊಪ್ಪಳ ಸಾಥ್ ನೀಡಿದರು. ಶಿಕ್ಷಕ ಪ್ರಾಣೇಶ್ ಪೂಜಾರ್ ಅವರು ವಂದನಾರ್ಪಣೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande