ಭಾರತ ಮತ್ತು ಬ್ರೆಜಿಲ್ ನೌಕಾಪಡೆಗಳ ಮುಖ್ಯಸ್ಥರ ಭೇಟಿ
ನವದೆಹಲಿ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾರತ ಮತ್ತು ಬ್ರೆಜಿಲ್ ನೌಕಾಪಡೆಗಳು ಕಾರ್ಯಾಚರಣೆ ಸಾಮರ್ಥ್ಯ ವೃದ್ಧಿ, ತರಬೇತಿ ವಿನಿಮಯ ಮತ್ತು ಕಡಲ ಜಾಗೃತಿಯಲ್ಲಿ ಸಹಕಾರ ಹೆಚ್ಚಿಸಲು ಒಪ್ಪಿಕೊಂಡಿವೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಮತ್ತು ಬ್ರೆಜಿಲ್ ನೌಕಾಪಡೆಯ ಕಮಾಂಡರ
Info brejel navy


ನವದೆಹಲಿ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತ ಮತ್ತು ಬ್ರೆಜಿಲ್ ನೌಕಾಪಡೆಗಳು ಕಾರ್ಯಾಚರಣೆ ಸಾಮರ್ಥ್ಯ ವೃದ್ಧಿ, ತರಬೇತಿ ವಿನಿಮಯ ಮತ್ತು ಕಡಲ ಜಾಗೃತಿಯಲ್ಲಿ ಸಹಕಾರ ಹೆಚ್ಚಿಸಲು ಒಪ್ಪಿಕೊಂಡಿವೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಮತ್ತು ಬ್ರೆಜಿಲ್ ನೌಕಾಪಡೆಯ ಕಮಾಂಡರ್ ಅಡ್ಮಿರಲ್ ಮಾರ್ಕೋಸ್ ಸಂಪಾಯೊ ಓಲ್ಸನ್ ನಡುವಿನ ಮಾತುಕತೆಗಳಿಂದ ತಿಳಿದು ಬಂದಿದೆ.

ಬ್ರೆಜಿಲ್‌ಗೆ ನಾಲ್ಕು ದಿನಗಳ ಅಧಿಕೃತ ಭೇಟಿಯಲ್ಲಿ ಇದ್ದ ತ್ರಿಪಾಠಿ, ಎರಡು ದೇಶಗಳ ನೌಕಾಪಡೆಗಳ ನಡುವೆ ಬೆಳೆಯುತ್ತಿರುವ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚಿಸಿದರು. ಸಭೆಯಲ್ಲಿ ಕಾರ್ಯಾಚರಣೆಯ ಮಾಹಿತಿ ಹಂಚಿಕೆ, ಹೈಡ್ರೋಗ್ರಾಫಿಕ್ ಸಹಕಾರ, ನವೀನ ತಂತ್ರಜ್ಞಾನ ಮತ್ತು ರಕ್ಷಣಾ ಉದ್ಯಮದಲ್ಲಿ ಸಹಕಾರ ಹೆಚ್ಚಿಸುವ ಮಾರ್ಗಗಳ ಕುರಿತು ಒತ್ತು ನೀಡಲಾಯಿತು.

ಭಾರತ–ಬ್ರೆಜಿಲ್ ಕಡಲ ಪಾಲುದಾರಿಕೆಯನ್ನು ಬಲಪಡಿಸುವುದು ಜಾಗತಿಕ ದಕ್ಷಿಣಕ್ಕೆ ಸ್ಥಿರತೆಯನ್ನು ನೀಡುವುದರೊಂದಿಗೆ, ಎರಡು ನೌಕಾಪಡೆಗಳ ಸಾಮರ್ಥ್ಯ ವೃದ್ಧಿಗೆ ನೆರವಾಗುತ್ತದೆ ಎಂದು ನೌಕಾಪಡೆಯ ಪ್ರಕಟಣೆ ತಿಳಿಸಿದೆ.

ತ್ರಿಪಾಠಿ ಅವರು ಡಿಸೆಂಬರ್ 12 ರವರೆಗೆ ಬ್ರೆಜಿಲ್‌ನಲ್ಲಿ ಉಳಿದು, ರಕ್ಷಣಾ ಸಚಿವ ಜೋಸ್ ಮ್ಯೂಸಿಯೊ, ಮತ್ತು ಸಶಸ್ತ್ರ ಪಡೆಗಳ ಜಂಟಿ ಮುಖ್ಯಸ್ಥ ಅಡ್ಮಿರಲ್ ರೆನಾಟೊ ರೊಡ್ರಿಗಸ್ ಫ್ರೈರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಭೇಟಿಯು ದ್ವಿಪಕ್ಷೀಯ ಕಡಲ ಸಹಕಾರ ಪರಿಶೀಲನೆ, ಹೊಸ ಸಹಕಾರ ಮಾರ್ಗಗಳ ಅನ್ವೇಷಣೆ ಮತ್ತು ಬ್ರೆಜಿಲ್ ನೌಕಾ ನೆಲೆಗಳು ಹಾಗೂ ಹಡಗುಕಟ್ಟೆಗಳಿಗೆ ಭೇಟಿಗಳನ್ನು ಒಳಗೊಂಡಿದೆ.

ಸಮುದ್ರ ಭದ್ರತೆ, ವಾಣಿಜ್ಯ ಮತ್ತು ಸಾಮರ್ಥ್ಯ ವೃದ್ಧಿಯ ಕ್ಷೇತ್ರಗಳಲ್ಲಿ ಸಹಕಾರ ಗಟ್ಟಿಯಾಗುವುದರಿಂದ ಜಾಗತಿಕ ಕಡಲ ಕ್ಷೇತ್ರದಲ್ಲಿ ಸ್ಥಿರತೆ ಹೆಚ್ಚಲಿದೆ ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande