


ಕೊಪ್ಪಳ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನಾವು ಕಾಲಕಾಲದಿಂದಲೂ ಇಲ್ಲಿನ ಕೃಷಿ, ಭಾಗ್ಯನಗರದ ಗುಡಿ ಕೈಗಾರಿಕೆಗಳನ್ನು ನಂಬಿಕೊಂಡು, ತುಂಗಭದ್ರಾ ಹಿನ್ನೀರಿನ ಅಂತರ್ಜಲ ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದೇವೆ. ಆದರೆ ಇತ್ತೀಚಿಗೆ ಮೂರು ದೇಶಕಗಳಿಂದ ಬಂದ ಧನದಾಹಿ ಕಾರ್ಖಾನೆಗಳು ನಮ್ಮ ಬದುಕನ್ನೇ ಮೂರಾಬಟ್ಟೆ ಮಾಡಿವೆ ಎಂದು ಎಂದು ದದೇಗಲ್ ಗ್ರಾಮದ ನಿವೃತ್ತ ಪಿಡಿಓ ಗೋವಿಂದಪ್ಪ ಬಂಡಿ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಕೊಪ್ಪಳ ಪಕ್ಕದಲ್ಲಿ ಬಲ್ನೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ ಇಂಡಿಯಾ ಮಾಲಿನ್ಯಕಾರಕ ಕಾರ್ಖಾನೆಗಳ ವಿಸ್ತರಣೆ ಬೇಡ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ 41ನೇ ದಿನದ ಧರಣಿ ಬೆಂಬಲಿಸಿ ಮಾತನಾಡಿದರು.
ದದೇಗಲ್ ಗ್ರಾಮದ ಯುವ ಮುಖಂಡ ಸುರೇಶ್ ಪೂಜಾರ್, ಕೊಪ್ಪಳ ತಾಲೂಕು ಕಾಲಕಾಲದಿಂದಲೂ ಶಾಂತವಾದ ಜೀವನ ನಡೆಸುತ್ತಾ ತನ್ನ ಅಭಿವೃದ್ಧಿಯನ್ನು ಇಲ್ಲಿನ ಪರಿಸರದ ಸಂಪನ್ಮೂಲಗಳನ್ನು ಅವಲಂಬಿಸಿಕೊಂಡು ಜೀವನ ಕಟ್ಟಿಕೊಂಡಿದೆ. ಈ ಶಾಂತತೆಯನ್ನು ಕದಡಿ, ಇಲ್ಲಿನ ಆರಾಧ್ಯ ದೈವ ಶ್ರೀ ಗವಿಸಿದ್ದೇಶ್ವರರ ಶಕ್ತಿಪೀಠ ಇದ್ದರು ಅದನ್ನು ಸಹಿತ ಲೆಕ್ಕಿಸದೆ, ಒಂದುವರೆ ಲಕ್ಷ ಜನರ ಬದುಕು ಆರೋಗ್ಯ ಕೆಡಿಸುತ್ತೇನೆಂದರೆ ಇಲ್ಲಿನ ರಾಜಕಾರಣಿಗಳ ಕಣ್ಣು ಕುರುಡಾಗಿ, ಕಿವಿ ಕಿವುಡಾಗಿ, ಮೂಕರಾಗಿ, ನಡೆದುಕೊಳ್ಳುತ್ತಿರುವುದು ಯಾರ ಉದ್ದಾರಕ್ಕಾಗಿ? ಎಂದು ಪ್ರಶ್ನಿಸಿದರು.
ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ವಿ. ಜಡಿಯವರ್, ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಗೋನಾಳ, ನಿವೃತ್ತ ಬಿಎಸ್‍ಎನ್‍ಎಲ್ ಅಧಿಕಾರಿ ಹನುಮಂತಪ್ಪ ಗೊಂದಿ, ನಿವೃತ್ತ ಕಾರ್ಮಿಕ ಅಧಿಕಾರಿ ಶಾಂತಯ್ಯ ಅಂಗಡಿ, ನಿವೃತ್ತ ಪ್ರಿನ್ಸಿಪಾಲ ಎಸ್.ಬಿ.ರಾಜೂರು, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಬಸವರಾಜ ಶೀಲವಂತರ, ಕಲ್ಲಮ್ಮ ಮೆತಗಲ್, ದದೇಗಲ್ ಶ್ರೀ ಮಾರುತೇಶ್ವರ ಸೇವಾ ಸಮಿತಿಯ ಹೊಟ್ಟೆಪ್ಪ ಮೂಗಿನ್, ಹನುಮಂತಪ್ಪ ಹಳ್ಳಿಕೇರಿ, ಶಿವಪ್ಪ ಮೈನಹಳ್ಳಿ, ಮಾರುತಿ ತಳವಾರ, ಬಸಪ್ಪ ಪೈಲ್ವಾನ್, ವಿಕ್ರಂ ಎಂ ಪೂಜಾರ್, ಹನುಮಂತಪ್ಪ ಲಂಕಿ, ಜ್ಯೋತಿ ಬಸು, ಮಂಜುನಾಥ ಪ್ರಸಾದ್, ದೇವಪ್ಪ ಕುದುರೆಮೋತಿ, ಶರಣು ಗಡ್ಡಿ, ರಾಯಚೂರು, ಶಿವಪ್ಪ ಹಡಪದ, ಮಹಾದೇವಪ್ಪ ಮಾವಿನಮಡು ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್