ಡಿಸೆಂಬರ್ 13, 14 : ಕೇಸರಹಟ್ಟಿಯಲ್ಲಿ `ಸಂಸಾರದಲ್ಲಿ ಸನಿದಪ’ ನಾಟಕ
ಗಂಗಾವತಿ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಶ್ರೀಮತಿ ಗದ್ದಡಕಿ ಗಂಗಮ್ಮ ದೇವಪ್ಪ ಎಜ್ಯುಕೇಷನಲ್ ಟ್ರಸ್ಟ್ ಕೇಸರಹಟ್ಟಿ ಹಾಗು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯು ಕೇಸರಹಟ್ಟಿಯ `ಧಾತ್ರಿ ರಂಗಸಂಸ್ಥೆ’ಯು ಡಿಸೆಂಬರ್ 13 ಮತ್ತು 14 ರಂದು ನಾಟಕೋತ್ಸವವನ್ನು ಏರ್ಪಡಿಸಿದೆ.
ಡಿಸೆಂಬರ್ 13 ಮತ್ತು 14 : ಕೇಸರಹಟ್ಟಿಯಲ್ಲಿ `ಸಂಸಾರದಲ್ಲಿ ಸನಿದಪ’ ನಾಟಕ


ಗಂಗಾವತಿ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶ್ರೀಮತಿ ಗದ್ದಡಕಿ ಗಂಗಮ್ಮ ದೇವಪ್ಪ ಎಜ್ಯುಕೇಷನಲ್ ಟ್ರಸ್ಟ್ ಕೇಸರಹಟ್ಟಿ ಹಾಗು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯು ಕೇಸರಹಟ್ಟಿಯ `ಧಾತ್ರಿ ರಂಗಸಂಸ್ಥೆ’ಯು ಡಿಸೆಂಬರ್ 13 ಮತ್ತು 14 ರಂದು ನಾಟಕೋತ್ಸವವನ್ನು ಏರ್ಪಡಿಸಿದೆ.

ಶಾಲೆಯ ಆಡಳಿತಾಧಿಕಾರಿ ಲಿಂಗರೆಡ್ಡಿ ಆಲೂರು ಅವರು ಈ ಮಾಹಿತಿ ನೀಡಿದ್ದು, ಡಿಸೆಂಬರ್ 13ರ ಶನಿವಾರ ಸಂಜೆ 06 ಗಂಟೆಗೆ ಮಂಡ್ಯ ರಮೇಶ್ ನಿರ್ದೇಶನದ `ಸಂಸಾರದಲಿ ಸನಿದಪ’, ಡಿಸೆಂಬರ್ 14 ರ ಭಾನುವಾರ ಜಗದೀಶ್ ಆರ್. ಜಾನಿ ನಿರ್ದೇಶನದ `ಶಿವಶರಣ ಹರಳಯ್ಯ’ ನಾಟಕವು ಪ್ರದರ್ಶನಗೊಳ್ಳಲಿದೆ.

ನಾಟಕೋತ್ಸವವನ್ನು ಕೊಪ್ಪಳ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಅವರು ಉದ್ಘಾಟಿಸಲಿದ್ದಾರೆ. ಟ್ರಸ್ಟನ ಅಧ್ಯಕ್ಷ ಜಿ. ಶ್ರೀಧರ, ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಹಾಗು ಟ್ರಸ್ಟ್ ನ ಕಾರ್ಯದರ್ಶಿ ಜಯಶ್ರೀ ಜಿ. ಶ್ರೀಧರ ಅವರು ನಾಟಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande