
ಬೆಳಗಾವಿ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಸಮಸ್ಯೆ ಆಲಿಸಲು ಪ್ರತಿಭಟನಾ ಸ್ಥಳಕ್ಕೆ NHM MD ಅವಿನಾಶ್ ಮೆನನ್ ಅವರೊಂದಿಗೆ ತೆರಳಿ, ಅಹವಾಲು ಸ್ವಿಕರಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಆಶಾ ಕಾರ್ಯಕರ್ತೆಯರಿಂದ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಾಧ್ಯವಾಗಿದೆ. ಅವರು ಆರೋಗ್ಯ ಇಲಾಖೆಯ ಮುಂಚೂಣಿ ಕಾರ್ಯಕರ್ತರು. ಅವರ ಸಮಸ್ಯೆ ಬಗೆಹರಿಸಲು ಎಲ್ಲ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಹಲವಾರು ಆರೋಗ್ಯ ಸಂಬಂಧಿ ಯೋಜನೆಗಳು ಕೆಂದ್ರ ಸರ್ಕಾರದ ನಿಯಂತ್ರಣದಲ್ಲಿ ಇರುತ್ತದೆ. ಆಶಾ ಕಾರ್ಯಕರ್ತೆಯರ ವಿಷಯದಲ್ಲೂ, ಸಭೆ ನಡೆಸಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಅಧಿಕೃತ ಆದೇಶ ಮಾಡಿಲ್ಲ. ಹಣ ಬಿಡುಗಡೆ ಮಾಡಿಲ್ಲ. ಕರ್ನಾಟಕ ಒಂದೇ ಅಲ್ಲ ದೇಶದಾದ್ಯಂತ ಸಮಸ್ಯೆ ಆಗಿದೆ. ನಾವು 40 ಕೋಟಿ ಹಣ ಹೆಚ್ಚುವರಿಯಾಗಿ ಮೀಸಲಿಟ್ಟಿದ್ದೆವು. ಅದರಲ್ಲಿ 23 ಕೋಟಿ ವೆಚ್ಚವಾಗಿ ಇನ್ನೂ 17 ಕೋಟಿ ಹಣ ನಮ್ಮಲ್ಲಿ ಇದೆ. ಕೇಂದ್ರ ಸರ್ಕಾರದ ಭಾಗವಾದ 60% ಹಣ ನೀಡಿದರೆ, ತಕ್ಷಣ ನಮ್ಮ ಪಾಲನ್ನು ಬಿಡುಗಡೆ ಮಾಡುತ್ತೇವೆ. ಈಗ 30% ಆಶಾಕಾರ್ಯಕರ್ತೆಯರು 10-15 ಸಾವಿರ, 35-40% 9-10 ಸಾವಿರ, 30% 8-9 ಸಾವಿರ ಪಡೆಯುತ್ತಿದ್ದಾರೆ. ಈ ವ್ಯತ್ಯಾಸ ಯಾಕೆಂದರೆ ಕಡಿಮೆ ಜನಸಂಖ್ಯೆ ಇರುವ ಪ್ರದೇಶದವರಿಗೆ ಕಡಿಮೆ ಇನ್ಸೆಂಟಿವ್ ಬರುತ್ತದೆ. ನಾಳೆ ಅವರೊಂದಿಗೆ ಸಭೆ ನಡೆಸಿ ನಮ್ಮಲ್ಲಿರುವ ಮತ್ತು ಅವರ ಅಂಕಿಅಂಶಗಳನ್ನು ಪರಿಶೀಲನೆ ಮಾಡಿ, ಮನವರಿಕೆ ಮಾಡಿ ಕೊಡುತ್ತೇನೆ. ಹಾಗೆಯೇ ಅವರ ಉಳಿದ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಮ್ಮುಖದಲ್ಲಿಯೇ ಚರ್ಚಿಸೋಣ ಅಂತ ತಿಳಿಸಿದ್ದೇನೆ. ಮುಖ್ಯಮಂತ್ರಿಯವರಲ್ಲಿಯೂ ಒಂದೆರಡು ದಿನದಲ್ಲಿ ಇದರ ಕುರಿತು ಚರ್ಚಿಸುತ್ತೇನೆ. ಆಶಾ ಕಾರ್ಯಕರ್ತೆಯರ ಸಮಸ್ಯೆ ಪರಿಹಾರಕ್ಕೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತೇನೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa