
ಡೆಹ್ರಾಡೂನ್, 09 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡ್ ರಾಜ್ಯ ರಜತ ಜಯಂತಿ (25ನೇ ವಾರ್ಷಿಕ) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾರಂಭವು ಮಧ್ಯಾಹ್ನ 12.30ಕ್ಕೆ ಡೆಹ್ರಾಡೂನನಲ್ಲಿ ನಡೆಯಲಿದೆ.
ರಾಜ್ಯದ ಸ್ಥಾಪನೆಯಿಂದ ಇಂದಿನವರೆಗೆ ನಡೆದ ಅಭಿವೃದ್ಧಿ ಪ್ರಯಾಣವನ್ನು ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ವಿಮರ್ಶಿಸುವರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಾಜ್ಯದ ಮೂಲಸೌಕರ್ಯ, ಪ್ರವಾಸೋದ್ಯಮ, ಹಿಮಾಲಯ ಪರಿಸರ ಸಂರಕ್ಷಣೆ ಹಾಗೂ ಯುವಶಕ್ತಿಯ ಪಾತ್ರ ಕುರಿತು ಪ್ರಧಾನಿ ಮಾತನಾಡುವ ಸಾಧ್ಯತೆಯಿದೆ.
ಸಮಾರಂಭದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವರು ಹಾಗೂ ಅನೇಕ ಗಣ್ಯರು ಉಪಸ್ಥಿತರಿರುವರು. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಈ ವೇಳೆ ಗೌರವ ಪ್ರದಾನವೂ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa