ಬಿಹಾರ ಚುನಾವಣಾ ಪ್ರಚಾರದಲ್ಲಿ ಅಮಿತ್ ಶಾ
ಪಾಟ್ನಾ, 09 ನವೆಂಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಇಂದು ಬಿಹಾರದಲ್ಲಿ ಎರಡು ಪ್ರಮುಖ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೊದಲ ಜನಸಭೆ ಮಧ್ಯಾಹ್ನ 12.45ಕ್ಕೆ ಸಸಾರಾಮಿನ ಫಜಲಗಂಜ್ ಕ್ರೀಡಾಂಗಣ ಮೈದಾನದಲ್ಲಿ ನಡೆಯಲಿದೆ. ಈ ಸಭೆ ಚೆನಾರಿ,
Amit sha


ಪಾಟ್ನಾ, 09 ನವೆಂಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಇಂದು ಬಿಹಾರದಲ್ಲಿ ಎರಡು ಪ್ರಮುಖ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮೊದಲ ಜನಸಭೆ ಮಧ್ಯಾಹ್ನ 12.45ಕ್ಕೆ ಸಸಾರಾಮಿನ ಫಜಲಗಂಜ್ ಕ್ರೀಡಾಂಗಣ ಮೈದಾನದಲ್ಲಿ ನಡೆಯಲಿದೆ. ಈ ಸಭೆ ಚೆನಾರಿ, ಸಸಾರಾಮ್, ಕರಗಹರ್ ಮತ್ತು ಡೆಹ್ರಿ ವಿಧಾನ ಸಭಾ ಕ್ಷೇತ್ರಗಳ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ.

ಎರಡನೇ ಜನಸಭೆ ಮಧ್ಯಾಹ್ನ 2.15ಕ್ಕೆ ಅರವಲ್ ಜಿಲ್ಲೆಯ ಮಧುಸರ್ಮಾ ಮೇಳ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ಅವಲ್ ಮತ್ತು ಕುರ್ಥಾ ವಿಧಾನ ಸಭಾ ಕ್ಷೇತ್ರಗಳ ಜನರೊಂದಿಗೆ ಸಂವಾದದ ಭಾಗವಾಗಿ ಇರಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande