ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ
ವೆಲ್ಲಿಂಗ್ಟನ್, 07 ನವೆಂಬರ್ (ಹಿ.ಸ.) : ಆ್ಯಂಕರ್ : ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ ತನ್ನ ತಂಡವನ್ನು ಘೋಷಿಸಿದ್ದು, ವೇಗದ ಬೌಲರ್ ಮ್ಯಾಟ್ ಹೆನ್ರಿ ಪುನಃ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಪಂದ್ಯಗಳಿ
Team


ವೆಲ್ಲಿಂಗ್ಟನ್, 07 ನವೆಂಬರ್ (ಹಿ.ಸ.) :

ಆ್ಯಂಕರ್ : ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ ತನ್ನ ತಂಡವನ್ನು ಘೋಷಿಸಿದ್ದು, ವೇಗದ ಬೌಲರ್ ಮ್ಯಾಟ್ ಹೆನ್ರಿ ಪುನಃ ತಂಡಕ್ಕೆ ಮರಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಪಂದ್ಯಗಳಿಂದ ಗಾಯದ ಕಾರಣದಿಂದ ಹೊರಗುಳಿದಿದ್ದ ಹೆನ್ರಿ ಈಗ ಸಂಪೂರ್ಣವಾಗಿ ಸಿದ್ದವಾಗಿದ್ದಾರೆ ಎಂದು ತಂಡದ ವೈದ್ಯಕೀಯ ತಂಡ ದೃಢಪಡಿಸಿದೆ.

ಇದರೊಂದಿಗೆ ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ತೋರಿದ ಬ್ಲೇರ್ ಟಿಕ್ನರ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

32 ವರ್ಷದ ಟಿಕ್ನರ್ ಎರಡನೇ ಮತ್ತು ಮೂರನೇ ಏಕದಿನಗಳಲ್ಲಿ ಸತತವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗಳಿಸಿ, ಕೇವಲ ಎರಡು ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದರು. 2023ರ ನಂತರ ಇದು ಅವರ ಮೊದಲ ಏಕದಿನ ಸರಣಿ ಆಗಿತ್ತು.

ನ್ಯೂಜಿಲೆಂಡ್ ತಂಡದ ಗಾಯಾಳುಗಳ ಪಟ್ಟಿ ಇನ್ನೂ ಉದ್ದವಾಗಿದೆ. ಫಿನ್ ಅಲೆನ್, ಲಾಕಿ ಫರ್ಗುಸನ್, ಆಡಮ್ ಮಿಲ್ನೆ, ವಿಲ್ ಒ’ರೂರ್ಕ್, ಗ್ಲೆನ್ ಫಿಲಿಪ್ಸ್ ಹಾಗೂ ಬೆನ್ ಸಿಯರ್ಸ್ ಗಾಯದ ಕಾರಣದಿಂದಾಗಿ ಲಭ್ಯವಿಲ್ಲ. ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್ ಸರಣಿಗೆ ತಯಾರಾಗುತ್ತಿರುವುದರಿಂದ ಏಕದಿನ ಆಯ್ಕೆಗೆ ಪರಿಗಣಿಸಿಲ್ಲ.

ಮ್ಯಾಟ್ ಹೆನ್ರಿ ನಮ್ಮ ವೇಗದ ದಾಳಿಯ ಹಿರಿಯ ನಾಯಕ. ಅವರು ಈಗ ಸಂಪೂರ್ಣವಾಗಿ ವಿಶ್ರಾಂತಿ ಪಡೆದು, ಶಕ್ತಿಯುತವಾಗಿ ಮರಳಿದ್ದಾರೆ. ಮುಂದಿನ ಐದು ವಾರಗಳು ಬಿಳಿ ಮತ್ತು ಕೆಂಪು ಚೆಂಡಿನ ಕ್ರಿಕೆಟ್ ಎರಡರಲ್ಲೂ ನಿರ್ಣಾಯಕವಾಗಲಿವೆ,

“ಟಿಕ್ನರ್ ಇಂಗ್ಲೆಂಡ್ ವಿರುದ್ಧ ತೋರಿಸಿದ ಶಕ್ತಿ ಮತ್ತು ವೇಗ ಪ್ರಶಂಸನೀಯ. ಅಲ್ಪಾವಧಿಯಲ್ಲಿ ಆ ಮಟ್ಟದ ಪ್ರದರ್ಶನ ನೀಡುವುದು ಅವರ ಪರಿಶ್ರಮದ ಫಲ,” ಎಂದು ಮುಖ್ಯ ತರಬೇತುದಾರ ರಾಬ್ ವಾಲ್ಟರ್ ಹೇಳಿದ್ದಾರೆ

ಇಂಗ್ಲೆಂಡ್ ವಿರುದ್ಧದ 3-0 ಅಂತರದ ಕ್ಲೀನ್ ಸ್ವೀಪ್ ಬಳಿಕ ನ್ಯೂಜಿಲೆಂಡ್ ತಂಡ ಈಗ ಸತತ 11ನೇ ಏಕದಿನ ಸರಣಿ ಗೆಲುವಿನ ಗುರಿ ಇಟ್ಟುಕೊಂಡಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ವೇಳಾಪಟ್ಟಿ ಹೀಗಿದೆ

ಮೊದಲ ಪಂದ್ಯ: ನವೆಂಬರ್ 16 – ಕ್ರೈಸ್ಟ್‌ಚರ್ಚ್

ಎರಡನೇ ಪಂದ್ಯ: ನವೆಂಬರ್ 19 – ನೇಪಿಯರ್

ಮೂರನೇ ಪಂದ್ಯ: ನವೆಂಬರ್ 22 – ಹ್ಯಾಮಿಲ್ಟನ್

ನ್ಯೂಜಿಲೆಂಡ್ ಏಕದಿನ ತಂಡ:

ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ರಾಚಿನ್ ರವೀಂದ್ರ, ನಾಥನ್ ಸ್ಮಿತ್, ಬ್ಲೇರ್ ಟಿಕ್ನರ್, ವಿಲ್ ಯಂಗ್.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande