ಗದಗನಲ್ಲಿ ಮಹಿಳೆಯರ ಕೈಯಲ್ಲಿ ಲಾಠಿ
ಗದಗ, 05 ನವೆಂಬರ್ (ಹಿ.ಸ.) : ಆ್ಯಂಕರ್ : ಮಹಿಳೆಯರ ಮೇಲೆ ನಡೆಯುತ್ತಿರುವ ಚುಡಾಯಿಸುವ ಘಟನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗದಗ ನಗರದಲ್ಲಿ ವಿಶಿಷ್ಟ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. “ನಮ್ಮ ರಕ್ಷಣೆ ನಮ್ಮ ಹೊಣೆ” ಎಂಬ ಸಂಕಲ್ಪದೊಂದಿಗೆ ಕ್ರಾಂತಿ ಸೇನಾ, ಹಿಂದೂ ಜನಜಾಗೃತಿ ಮತ್ತು ರಾಜರಾಜೇಶ್ವರಿ
ಫೋಟೋ


ಗದಗ, 05 ನವೆಂಬರ್ (ಹಿ.ಸ.) :

ಆ್ಯಂಕರ್ : ಮಹಿಳೆಯರ ಮೇಲೆ ನಡೆಯುತ್ತಿರುವ ಚುಡಾಯಿಸುವ ಘಟನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗದಗ ನಗರದಲ್ಲಿ ವಿಶಿಷ್ಟ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. “ನಮ್ಮ ರಕ್ಷಣೆ ನಮ್ಮ ಹೊಣೆ” ಎಂಬ ಸಂಕಲ್ಪದೊಂದಿಗೆ ಕ್ರಾಂತಿ ಸೇನಾ, ಹಿಂದೂ ಜನಜಾಗೃತಿ ಮತ್ತು ರಾಜರಾಜೇಶ್ವರಿ ಮಹಿಳಾ ಮಂಡಳಿಗಳು ಯುವತಿಯರಿಗೆ ಲಾಠಿ ಶೌರ್ಯ ತರಬೇತಿ ನೀಡುತ್ತಿವೆ.

ಗದಗ ನಗರದ ಐತಿಹಾಸಿಕ ತ್ರೀಕೂಟೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ಈ ತರಬೇತಿಯಲ್ಲಿ 14ರಿಂದ 45 ವರ್ಷದೊಳಗಿನ ನೂರಾರು ಯುವತಿಯರು ಹಾಗೂ ಮಹಿಳೆಯರು ಉಚಿತವಾಗಿ ಪಾಲ್ಗೊಂಡಿದ್ದಾರೆ. ಗೋವಾಕ್ಕೆ ಸೇರಿದ ಪರಿಣಿತ ತರಬೇತಿದಾರರಿಂದ ಲಾಠಿ ಕಲೆ ಹಾಗೂ ಸ್ವರಕ್ಷಣಾ ತಂತ್ರಗಳಾದ ಶೀರಪ್ರಹಾರ, ಗದಪ್ರಹಾರ, ಚಹರಿ ಪ್ರಹಾರ, ಏಕಮುಖಿ ಹಾಗೂ ದ್ವಿಮುಖ ಚಕ್ರ ಪ್ರಹಾರಗಳ ತರಬೇತಿ ನೀಡಲಾಗುತ್ತಿದೆ.

ಲಾಠಿ ಹಿಡಿದು ಧೈರ್ಯದಿಂದ ಶೌರ್ಯ ಪ್ರದರ್ಶನ ನೀಡುತ್ತಿರುವ ಯುವತಿಯರು, “ಇದರಿಂದ ಆತ್ಮಸ್ಥೈರ್ಯ ಹೆಚ್ಚಾಗಿದೆ, ಈಗ ಒಂಟಿಯಾಗಿ ಹೊರಗಡೆ ಓಡಾಡಲು ಭಯವಿಲ್ಲ” ಎಂದು ಹೇಳಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ, ಚುಡಾಯಿಸುವ ಘಟನೆಗಳಿಗೆ ಬ್ರೇಕ್ ಹಾಕಲು ಈ ತರಬೇತಿ ಪರಿಣಾಮಕಾರಿ ಆಯುಧವಾಗಲಿದೆ ಎಂದು ಆಯೋಜಕರು ಹೇಳಿದ್ದಾರೆ.

ಈ “ಲಾಠಿ ಶೌರ್ಯ” ಅಭಿಯಾನ ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿದ್ದು, ಪುಂಡ ಬೋಕರಿಗಳಿಗೆ “ಹುಷಾರ್” ಎನ್ನುವ ಸಂದೇಶ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande