ಅಮೆರಿಕದ ಲೂಯಿಸ್‌ವಿಲ್ಲೆ ಬಳಿ ಯುಪಿಎಸ್ ಸರಕು ವಿಮಾನ ದುರಂತ
ವಾಷಿಂಗ್ಟನ್‌, 05 ನವೆಂಬರ್ (ಹಿ.ಸ.) : ಆ್ಯಂಕರ್ : ಮೂವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಯುಪಿಎಸ್ MD-11 ಸರಕು ವಿಮಾನವು ಅಮೇರಿಕಾದ ಕೆಂಟುಕಿಯ ಲೂಯಿಸ್‌ವಿಲ್ಲೆ ವಿಮಾನ ನಿಲ್ದಾಣದ ಬಳಿ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಫೆಡರಲ್ ಏವಿಯೇಷನ್ ಆಡಳಿತ ಮತ್ತು ರಾಷ್ಟ್ರೀಯ ಸಾರಿಗೆ
Plane crash


ವಾಷಿಂಗ್ಟನ್‌, 05 ನವೆಂಬರ್ (ಹಿ.ಸ.) :

ಆ್ಯಂಕರ್ : ಮೂವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಯುಪಿಎಸ್ MD-11 ಸರಕು ವಿಮಾನವು ಅಮೇರಿಕಾದ ಕೆಂಟುಕಿಯ ಲೂಯಿಸ್‌ವಿಲ್ಲೆ ವಿಮಾನ ನಿಲ್ದಾಣದ ಬಳಿ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.

ಫೆಡರಲ್ ಏವಿಯೇಷನ್ ಆಡಳಿತ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ಪ್ರಾರಂಭಿಸಿವೆ. ಸ್ಥಳೀಯ ಸಮಯ ಸಂಜೆ 5 ಗಂಟೆಯ ನಂತರ ಸಂಭವಿಸಿದ ಈ ಅಪಘಾತದಲ್ಲಿ ಗಾಯಗಳ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಯಾವುದೇ ಸಾವುನೋವು ದೃಢಪಟ್ಟಿಲ್ಲ.

ಅಪಘಾತದ ನಂತರ ವಿಮಾನ ನಿಲ್ದಾಣದ ಸುತ್ತಲಿನ ಐದು ಮೈಲಿ ಪ್ರದೇಶವನ್ನು ಮುಚ್ಚಲಾಗಿದೆ. ಹೊಗೆಯು ಆಕಾಶಕ್ಕೆ ಏರಿರುವ ದೃಶ್ಯಾವಳಿಗಳು ಹೊರಬಿದ್ದಿವೆ. UPS ನ “ವರ್ಡ್‌ಪೋರ್ಟ್” ಕೇಂದ್ರ ಲೂಯಿಸ್‌ವಿಲ್ಲೆಯಲ್ಲಿಯೇ ಇರುವುದರಿಂದ ಈ ಪ್ರದೇಶ ಕಂಪನಿಗೆ ಪ್ರಮುಖ ಕೇಂದ್ರವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande