
ಬೆಂಗಳೂರು, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಗುರುನಾನಕ್ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿರುವ ಅವರು,
ಪ್ರೀತಿ, ಕರುಣೆ, ಸತ್ಯ, ಸಹನೆ ಮುಂತಾದ ಮಾನವೀಯ ಮೌಲ್ಯಗಳಿಗೆ ಧಾರ್ಮಿಕ ನಂಬಿಕೆಗಳ ರೂಪಕೊಟ್ಟು, ಮನುಕುಲವನ್ನು ಸನ್ಮಾರ್ಗದತ್ತ ಮುನ್ನಡೆಸಿದ ಗುರು, ದಾರ್ಶನಿಕ, ಮಾನವತಾವಾದಿ ಗುರುನಾನಕ್ ದೇವ್ ಅವರ ಜಯಂತಿಯಂದು ಅವರ ಜೀವನ, ಆದರ್ಶವನ್ನು ನೆನೆದು, ನಮಿಸುತ್ತೇನೆ.
ಸಮಸ್ತ ಸಿಖ್ ಧರ್ಮಾನುಯಾಯಿಗಳಿಗೆ ಗುರುನಾನಕ್ ಜಯಂತಿ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa