ಪಶ್ಚಿಮ ಪದವೀಧರ ಮತಕ್ಷೇತ್ರದ ನೋಂದಣಿ ವಿಸ್ತರಿಸುವಂತೆ ಗೋವಿಂದಗೌಡ್ರ ಮನವಿ
ಗದಗ, 05 ನವೆಂಬರ್ (ಹಿ.ಸ.) : ಆ್ಯಂಕರ್ : ಪಶ್ಚಿಮ ಪದವೀಧರ ಮತಕ್ಷೇತ್ರದ ನೋಂದಣಿ ಕಾರ್ಯ ಇದೆ ಆರನೇ ತಾರೀಕು ಕೊನೆ ದಿನವೆಂದು ಈಗಾಗಲೇ ಚುನಾವಣಾ ಆಯೋಗ ಸೂಚಿಸಿದೆ. ಈ ಗಡುವನ್ನು ವಿಸ್ತರಿಸುವಂತೆ ಜೆಡಿಎಸ್ ಪಕ್ಷದ ರಾಜ್ಯ ವಕ್ತರ ವೆಂಕನಗೌಡ ಆರ್ ಗೋವಿಂದಗೌಡ್ರ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧ
ಫೋಟೋ


ಗದಗ, 05 ನವೆಂಬರ್ (ಹಿ.ಸ.) :

ಆ್ಯಂಕರ್ : ಪಶ್ಚಿಮ ಪದವೀಧರ ಮತಕ್ಷೇತ್ರದ ನೋಂದಣಿ ಕಾರ್ಯ ಇದೆ ಆರನೇ ತಾರೀಕು ಕೊನೆ ದಿನವೆಂದು ಈಗಾಗಲೇ ಚುನಾವಣಾ ಆಯೋಗ ಸೂಚಿಸಿದೆ. ಈ ಗಡುವನ್ನು ವಿಸ್ತರಿಸುವಂತೆ ಜೆಡಿಎಸ್ ಪಕ್ಷದ ರಾಜ್ಯ ವಕ್ತರ ವೆಂಕನಗೌಡ ಆರ್ ಗೋವಿಂದಗೌಡ್ರ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿ ಅವರಿಗೆ ಇ-ಮೇಲ್ ಮುಖಾಂತರ ಮನವಿ ಸಲ್ಲಿಸಿರುತ್ತಾರೆ.

ಕಳೆದ ತಿಂಗಳಿನಲ್ಲಿ ಹಲವಾರು ಹಬ್ಬಗಳು ಬಂದು ಬಹಳಷ್ಟು ರಜೆ ದಿನಗಳಿದ್ದವು ಹೀಗಾಗಿ ನೋಂದಣಿ ಇಂದ ಬಹಳ ಜನ ಹೊರಗೆ ಉಳಿದಿದ್ರೇ ಹಾಗೆಯೇ ಶಿಕ್ಷಕ ಸಮುದಾಯವು ಜಾತಿಗಣತಿಯ ಕಾರ್ಯದಲ್ಲಿ ತೊಡಗಿದ್ದರಿಂದ ಬಹಳಷ್ಟು ಶಿಕ್ಷಕರು ನೋಂದಣಿ ಆಗದೆ ಉಳಿದಿದ್ದಾರೆ ಹೆಚ್ಚು ಪ್ರಚಾರ ಸಿಗದ ಕಾರಣ ಇನ್ನೂ ನೋಂದಣಿ ಆಗುವ ಬಹಳಷ್ಟು ಜನ ಹಿಂದೆ ಬಿದ್ದಿದ್ದಾರೆ,ಕಾರಣ ಈ ಗಡುವನ್ನು ಇನ್ನೂ 15 ದಿನಗಳವರೆಗಾದರೂ ವಿಸ್ತರಿಸಬೇಕೆಂದು ವೆಂಕನಗೌಡ ಆರ್ ಗೋವಿಂದಗೌಡ್ರ ಒತ್ತಾಯಿಸಿದ್ದಾರೆ.

ಈ ಸಲ ನೋಂದಣಿ ಕಡಿಮೆಯಾಗಿದ್ದು ಎಲ್ಲಾ ಪದವೀಧರರನ್ನು ನೋಂದಾಯಿಸಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಹಾಗಾಗಿ ಈ ಗಡುವನ್ನು ವಿಸ್ತರಿಸುವಂತೆ ಮುಖ್ಯ ಚುನಾವಣಾ ಆಯುಕ್ತರಿಗೆ ಇ-ಮೇಲ್ ಮುಖಾಂತರ ವೆಂಕನಗೌಡ ಗೋವಿಂದಗೌಡ್ರ ಮನವಿ ಮಾಡಿಕೊಂಡದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande