
ನವದೆಹಲಿ, 05 ನವೆಂಬರ್ (ಹಿ.ಸ.) :
ಆ್ಯಂಕರ್ : ಪೋರ್ಚುಗಲ್ ಮತ್ತು ಅಲ್ ನಾಸರ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಶೀಘ್ರದಲ್ಲೇ ಫುಟ್ಬಾಲ್‌ನಿಂದ ನಿವೃತ್ತಿ ಪಡೆಯುವುದಾಗಿ ತಿಳಿಸಿದ್ದಾರೆ.
40 ವರ್ಷದ ರೊನಾಲ್ಡೊ ಅವರು “ನನ್ನ ವೃತ್ತಿಜೀವನದ ಅಂತ್ಯ ಹತ್ತಿರದಲ್ಲಿದೆ, ಅದು ಬಹಳ ಭಾವನಾತ್ಮಕ ಕ್ಷಣವಾಗಲಿದೆ” ಎಂದು ಪಿಯರ್ಸ್ ಮಾರ್ಗನ್ ಅನ್ಸೆನ್ಸಾರ್ಡ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ನಿವೃತ್ತಿಗೆ ನಾನು ಸಿದ್ಧನಾಗಿದ್ದೆನೆ ಅದು ಕಷ್ಟವಾಗಬಹುದು, ಆದರೆ ನಾನು ನನ್ನ ಭವಿಷ್ಯಕ್ಕಾಗಿ ಈಗಾಗಲೇ ತಯಾರಿ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ರೊನಾಲ್ಡೊ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 952 ಗೋಲುಗಳನ್ನು ದಾಖಲಿಸಿದ್ದಾರೆ. ನಿವೃತ್ತಿಯ ನಂತರ ತಮ್ಮ ಕುಟುಂಬ ಮತ್ತು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ಬಯಸುವುದಾಗಿ ತಿಳಿಸಿದ್ದಾರೆ. “ಫುಟ್ಬಾಲ್‌ನಲ್ಲಿ ಗೋಲು ಗಳಿಸುವ ಉತ್ಸಾಹಕ್ಕೆ ಸಮಾನವಾದುದು ಏನೂ ಇಲ್ಲ, ಆದರೆ ಈಗ ನಾನು ಕ್ರಿಸ್ಟಿಯಾನೊ ಜೂನಿಯರ್ ಮತ್ತು ನನ್ನ ಕುಟುಂಬದೊಂದಿಗೆ ಇರಲು ಬಯಸುತ್ತೇನೆ ಎಂದಿದ್ದಾರೆ.
ಅವರು ಸ್ಪೋರ್ಟಿಂಗ್ ಲಿಸ್ಬನ್‌ನಲ್ಲಿ ವೃತ್ತಿ ಆರಂಭಿಸಿ, ನಂತರ ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್ ಮತ್ತು ಜುವೆಂಟಸ್ ತಂಡಗಳಿಗಾಗಿ ಆಡಿದರು. ಯುನೈಟೆಡ್ ಜೊತೆ ಮೂರು ಪ್ರೀಮಿಯರ್ ಲೀಗ್ ಪ್ರಶಸ್ತಿಗಳು ಮತ್ತು ಒಂದು ಚಾಂಪಿಯನ್ಸ್ ಲೀಗ್ ಗೆದ್ದರೆ, ರಿಯಲ್ ಮ್ಯಾಡ್ರಿಡ್ ಜೊತೆ ನಾಲ್ಕು ಚಾಂಪಿಯನ್ಸ್ ಲೀಗ್ ಟ್ರೋಫಿಗಳನ್ನು ಜಯಿಸಿದರು.
2022ರಲ್ಲಿ ಯುನೈಟೆಡ್ ತೊರೆದು ಅವರು ಸೌದಿ ಅರೇಬಿಯಾದ ಅಲ್ ನಾಸ್ರ್ ಕ್ಲಬ್ ಸೇರಿದರು. “ಯುನೈಟೆಡ್‌ನ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇನೆ, ಆದರೆ ಕ್ಲಬ್ ಈಗ ಸರಿಯಾದ ದಾರಿಗೆ ಇಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಐದು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ರೊನಾಲ್ಡೊ ಅವರ ನಿವೃತ್ತಿ ಫುಟ್ಬಾಲ್ ಇತಿಹಾಸದ ಒಂದು ಯುಗದ ಅಂತ್ಯವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa