ವಿಜಯಪುರದಲ್ಲಿ ಮತ್ತೆ ಭೂಮಿ ಘಡ ಘಡಾ: ಹೆಚ್ಚಾಯಿತು ದುಗುಡ
ವಿಜಯಪುರ, 04 ನವೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ನಡುಗಿದೆ. ಇಂದು ಬೆಳಗಿನ 7.49ರ ಸುಮಾರಿಗೆ ಭೂಕಂಪನದ ಅನುಭವ ಜಿಲ್ಲೆಯ ಹಲವೆಡೆ ದಾಖಲಾಗಿದೆ. ವಿಜಯಪುರ ನಗರ ಸೇರಿದಂತೆ ತಿಕೋಟ, ಕಳ್ಳಕವಟಗಿ, ತೊರವಿ, ಶಿವಗಿರಿ ಹಾಗೂ ಹೊನ್ನೂಟಗಿ ಪ್ರದೇಶಗಳಲ್ಲಿಯೂ ಭೂಮಿ ನಡುಗಿದ ಅನ
ವಿಜಯಪುರದಲ್ಲಿ ಮತ್ತೆ ಭೂಮಿ ಘಡ ಘಡಾ: ಹೆಚ್ಚಾಯಿತು ದುಗುಡ


ವಿಜಯಪುರ, 04 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ನಡುಗಿದೆ. ಇಂದು ಬೆಳಗಿನ 7.49ರ ಸುಮಾರಿಗೆ ಭೂಕಂಪನದ ಅನುಭವ ಜಿಲ್ಲೆಯ ಹಲವೆಡೆ ದಾಖಲಾಗಿದೆ.

ವಿಜಯಪುರ ನಗರ ಸೇರಿದಂತೆ ತಿಕೋಟ, ಕಳ್ಳಕವಟಗಿ, ತೊರವಿ, ಶಿವಗಿರಿ ಹಾಗೂ ಹೊನ್ನೂಟಗಿ ಪ್ರದೇಶಗಳಲ್ಲಿಯೂ ಭೂಮಿ ನಡುಗಿದ ಅನುಭವ ನಾಗರಿಕರು ತಿಳಿಸಿದ್ದಾರೆ. ಸ್ಥಳೀಯ ನಿವಾಸಿಗಳ ಪ್ರಕಾರ, ಭೂಕಂಪನದ ವೇಳೆ ಭಾರೀ ಸ್ಪೋಟದಂತೆಯೇ ಸದ್ದು ಕೇಳಿ ನೆಲ ನಡುಗಿದ ಅನುಭವವಾಗಿದ್ದು, ಕೆಲವು ಪ್ರದೇಶಗಳಲ್ಲಿ ಸಿಸಿ ಕ್ಯಾಮರಾಗಳಲ್ಲಿ ಆ ಕ್ಷಣಗಳು ದಾಖಲಾಗಿವೆ.

ಸಿಸಿಟಿವಿ ದೃಶ್ಯಗಳಲ್ಲಿ ಜೋರಾದ ಸದ್ದು ಹಾಗೂ ಭೂಮಿ ಕಂಪಿಸುವ ದೃಶ್ಯಗಳು ಸ್ಪಷ್ಟವಾಗಿ ಕಾಣುತ್ತಿವೆ. ಭೂಕಂಪನ ಆಪ್‌ಗಳಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ ಸುಮಾರು 2.9 ಆಗಿದೆ. ಕಳೆದ ಎರಡು ತಿಂಗಳಲ್ಲಿ 13ನೇ ಬಾರಿ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಜಿಲ್ಲಾ ಆಡಳಿತ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಘಟನೆಯ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದು, ಕಂಪನದ ನಿಖರ ತೀವ್ರತೆ ಮತ್ತು ಕೇಂದ್ರಬಿಂದು ಕುರಿತು ಅಧ್ಯಯನ ನಡೆಯುತ್ತಿದೆ. ಅಧಿಕಾರಿಗಳು ಜನರನ್ನು ಆತಂಕಗೊಳ್ಳಬಾರದೆಂದು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande