ಹಲವು ದಾಖಲೆ ಮುರಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ
ನವಿ ಮುಂಬಯಿ, 03 ನವೆಂಬರ್ (ಹಿ.ಸ.) : ಆ್ಯಂಕರ್ : ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇತಿಹಾಸ ನಿರ್ಮಿಸಿದೆ. ನವಿ ಮುಂಬಯಿನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ, ಮೊದಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಯನ್ನು
Wwc


ನವಿ ಮುಂಬಯಿ, 03 ನವೆಂಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇತಿಹಾಸ ನಿರ್ಮಿಸಿದೆ. ನವಿ ಮುಂಬಯಿನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ, ಮೊದಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಕೊಂಡಿದೆ.

ಈ ಜಯದೊಂದಿಗೆ ಭಾರತವು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಂತರ ವಿಶ್ವಕಪ್ ಗೆದ್ದ ನಾಲ್ಕನೇ ರಾಷ್ಟ್ರವಾಯಿತು.

ಸ್ಮೃತಿ ಮಂಧಾನ 434 ರನ್‌ಗಳೊಂದಿಗೆ ಭಾರತದ ಪರ ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಮಿಥಾಲಿ ರಾಜ್ ಅವರ ದಾಖಲೆಯನ್ನು ಮುರಿದರು. ಅವರು 5000 ಏಕದಿನ ರನ್‌ಗಳ ಮೈಲುಗಲ್ಲು ತಲುಪಿದ ಎರಡನೇ ಭಾರತೀಯೆಯಾದರು.

ದೀಪ್ತಿ ಶರ್ಮಾ 22 ವಿಕೆಟ್‌ಗಳೊಂದಿಗೆ ಭಾರತದ ಪರ ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 200+ ರನ್ ಮತ್ತು 20+ ವಿಕೆಟ್ ಸಾಧನೆಯೊಂದಿಗೆ ವಿಶ್ವಕಪ್ ಇತಿಹಾಸದಲ್ಲೇ ವಿಶಿಷ್ಟ ಸಾಧನೆ ಮಾಡಿದರು.

ರಿಚಾ ಘೋಷ್ 8ನೇ ಕ್ರಮಾಂಕದಲ್ಲಿ 94 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು ಇದು ಮಹಿಳಾ ಏಕದಿನ ಪಂದ್ಯಗಳಲ್ಲಿ ಆ ಕ್ರಮಾಂಕದಲ್ಲಿ ಬಂದ ಅತ್ಯಧಿಕ ಸ್ಕೋರ್.

ಈ ಗೆಲುವಿನೊಂದಿಗೆ ಭಾರತವು ಆಸ್ಟ್ರೇಲಿಯಾದ 15 ಪಂದ್ಯಗಳ ಅಜೇಯ ಸರಣಿಯನ್ನು ಮುರಿದಿದೆ.

ಈ ಜಯ ಭಾರತೀಯ ಮಹಿಳಾ ಕ್ರಿಕೆಟ್‌ನ ಸುವರ್ಣ ಯುಗದ ಆರಂಭವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande