
ಢಾಕಾ, 26 ನವೆಂಬರ್ (ಹಿ.ಸ.) :
ಆ್ಯಂಕರ್ : ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ–1 ಮರಣದಂಡನೆ ವಿಧಿಸಿದ ಹಿನ್ನೆಲೆ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಅವರ ಚರಾಸ್ತಿ ಮತ್ತು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ವೇಗಗೊಳಿಸಿದೆ. ಈ ಕ್ರಮದ ಅಂಗವಾಗಿ ರಾಷ್ಟ್ರೀಯ ಕಂದಾಯ ಮಂಡಳಿಯ ಕೇಂದ್ರ ಗುಪ್ತಚರ ಘಟಕ, ಸೋಮವಾರ ಢಾಕಾದ ಮೋತಿಝೀಲ್ ಪ್ರದೇಶದಲ್ಲಿರುವ ಅಗ್ರಾನಿ ಬ್ಯಾಂಕಿನ ಮುಖ್ಯ ಶಾಖೆಯಲ್ಲಿ ಹಸೀನಾ ಅವರ ಹೆಸರಿನ ಎರಡು ಲಾಕರ್‌ಗಳನ್ನು ತೆರೆಯುವ ಕಾರ್ಯಾಚರಣೆ ನಡೆಸಿತು.
ಕಾರ್ಯಾಚರಣೆಯಲ್ಲಿ ಒಟ್ಟು 832.51 ಭೋರಿ (ಸುಮಾರು 9.704 ಕೆಜಿ) ಚಿನ್ನಾಭರಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 751 ಮತ್ತು 753 ಸಂಖ್ಯೆಯ ಲಾಕರ್‌ಗಳಿಂದ ಚಿನ್ನದ ಜೊತೆಗೆ, ಭಾರತ ಹಾಗೂ ವಿದೇಶಗಳಿಂದ ಪಡೆದಿರುವ ಪ್ರಶಸ್ತಿಗಳು ಮತ್ತು ಉಡುಗೊರೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಇದೇ ದಿನ ಪುಬಾಲಿ ಬ್ಯಾಂಕಿನಲ್ಲಿರುವ ಹಸೀನಾ ಅವರ ಮತ್ತೊಂದು ಲಾಕರ್‌ನ್ನು ತೆರೆಯಲಾಯಿತು. ಆದರೆ ಅದರಲ್ಲಿ ಯಾವುದೇ ಆಸ್ತಿ ಪತ್ತೆಯಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa