ಇಂದು ಬದರಿನಾಥ ದೇವಾಲಯದ ಬಾಗಿಲು ಬಂದ್
ಡೆಹ್ರಾಡೂನ್, 25 ನವೆಂಬರ್ (ಹಿ.ಸ.) : ಆ್ಯಂಕರ್ : ವಿಶ್ವಪ್ರಸಿದ್ಧ ಬದರಿನಾಥ ಧಾಮದಲ್ಲಿ ಇಂದು ಚಳಿಗಾಲದ ವಿರಾಮ ಆರಂಭಗೊಂಡಿದೆ. ಮಧ್ಯಾಹ್ನ 2:56ಕ್ಕೆ ಶುಭ ಲಗ್ನದಲ್ಲಿ ದೇವಾಲಯದ ಬಾಗಿಲುಗಳನ್ನು ಸಂಪ್ರದಾಯಬದ್ಧವಾಗಿ ಮುಚ್ಚಲಾಗುವುದು. ಆರು ತಿಂಗಳು ಮಾನವರು ಮತ್ತು ಮುಂದಿನ ಆರು ತಿಂಗಳು ದೇವತೆಗಳು ಭಗವಾನ
Badrinath door close


ಡೆಹ್ರಾಡೂನ್, 25 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಶ್ವಪ್ರಸಿದ್ಧ ಬದರಿನಾಥ ಧಾಮದಲ್ಲಿ ಇಂದು ಚಳಿಗಾಲದ ವಿರಾಮ ಆರಂಭಗೊಂಡಿದೆ. ಮಧ್ಯಾಹ್ನ 2:56ಕ್ಕೆ ಶುಭ ಲಗ್ನದಲ್ಲಿ ದೇವಾಲಯದ ಬಾಗಿಲುಗಳನ್ನು ಸಂಪ್ರದಾಯಬದ್ಧವಾಗಿ ಮುಚ್ಚಲಾಗುವುದು. ಆರು ತಿಂಗಳು ಮಾನವರು ಮತ್ತು ಮುಂದಿನ ಆರು ತಿಂಗಳು ದೇವತೆಗಳು ಭಗವಾನ್ ಬದರಿನಾಥನನ್ನು ಪೂಜಿಸುತ್ತಾರೆ ಎಂಬ ನಂಬಿಕೆಗೆ ಅನುಗುಣವಾಗಿ ಈ ಸಂಪ್ರದಾಯ ನಡೆಲಿದೆ.

ಬೆಳಿಗ್ಗೆಯಿಂದಲೇ ಭಕ್ತರ ಭೇಟಿ ಹೆಚ್ಚಾಗಿದ್ದು, ವಿಧಿವಿಧಾನಗಳೊಂದಿಗೆ ಲಕ್ಷ್ಮಿ ದೇವಿ ಮತ್ತು ಭಗವಾನ್ ಬದರಿನಾಥರಿಗೆ ತುಪ್ಪದ ಕಂಬಳಿ ಹೊದೆಸುವ ಮಂಗಲ ವಿಧಿ ನೆರವೇರಿಸಲಾಯಿತು. ಶಾಶ್ವತ ದೀಪದ ಬೆಳಕಿನಲ್ಲಿ ಸಂಪ್ರದಾಯಪೂರ್ವಕ ಪೂಜೆಗಳು ನಡೆದ ಬಳಿಕ ಬಾಗಿಲುಗಳನ್ನು ಮುಚ್ಚಲಾಗುವುದು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande