
ನವದೆಹಲಿ, 25 ನವೆಂಬರ್ (ಹಿ.ಸ.) :
ಆ್ಯಂಕರ್ : ಸಿಖ್ ಪರಂಪರೆಯ ಅತ್ಯುನ್ನತ ತ್ಯಾಗದ ಸಂಕೇತವಾಗಿರುವ ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನಮನ ಸಲ್ಲಿಸಿದ್ದಾರೆ.
“ಶ್ರೀ ಗುರು ತೇಜ್ ಬಹದ್ದೂರ್ ಅವರ ಅಪ್ರತಿಮ ಧೈರ್ಯ, ತ್ಯಾಗ ಮತ್ತು ಮಾನವೀಯ ಮೌಲ್ಯಗಳ ರಕ್ಷಣೆಗೆ ಮಾಡಿದ ಅಸಾಧಾರಣ ಬಲಿದಾನವು ನಮ್ಮ ಸಮಾಜವನ್ನು ಸದಾ ಬೆಳಗಿಸುತ್ತದೆ,” ಎಂದು ಪ್ರಧಾನಿ ಹೇಳಿದ್ದಾರೆ.
ನಂಬಿಕೆ, ಧರ್ಮಸ್ವಾತಂತ್ರ್ಯ ಮತ್ತು ಮಾನವೀಯತೆಯನ್ನು ಕಾಪಾಡಲು ಗುರುತೇಜ್ ಬಹದ್ದೂರ್ ಜಿ ತೋರಿದ ಶೌರ್ಯ ರಾಷ್ಟ್ರಕ್ಕೆ ಸ್ಫೂರ್ತಿದಾಯಕ ಎಂದು ಅವರು ಸ್ಮರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa