
ನವದೆಹಲಿ, 25 ನವೆಂಬರ್ (ಹಿ.ಸ.) :
ಆ್ಯಂಕರ್ : ಸಿಖ್ ಧರ್ಮದ ಒಂಬತ್ತನೇ ಗುರು, ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನದ ಅಂಗವಾಗಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಅಮಿತ್ ಶಾ ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪೋಸ್ಟ್ ಮಾಡಿದ್ದು, ಗುರು ತೇಜ್ ಬಹದ್ದೂರ್ ಅವರ ಜೀವನವು ಆಳವಾದ ಆಧ್ಯಾತ್ಮಿಕತೆ, ಪವಿತ್ರ ಬೋಧನೆಗಳು ಮತ್ತು ಸಂಸ್ಕೃತಿ–ನಂಬಿಕೆಯ ರಕ್ಷಣೆಗೆ ಮಾಡಿದ ಅದಮ್ಯ ತ್ಯಾಗಗಳ ಸಂಕೇತವಾಗಿದೆ ಎಂದಿದ್ದಾರೆ.
ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನದಂದು, ನಾನು ಅವರಿಗೆ ನಮಸ್ಕರಿಸಿ ಗೌರವ ಸಲ್ಲಿಸುತ್ತೇನೆ. ತಮ್ಮ ಜೀವನವಿಡೀ ಧರ್ಮದ ರಕ್ಷಣೆಗೆ ಹೋರಾಡಿದ ಗುರು ಸಾಹಿಬ್ ಅವರ ತ್ಯಾಗ, ಶೌರ್ಯ ಮತ್ತು ಭಕ್ತಿ ಇಂದಿಗೂ ದೇಶದ ಪ್ರತಿಯೊಬ್ಬರಲ್ಲೂ ಹೆಮ್ಮೆಯನ್ನು ತುಂಬುತ್ತದೆ. ಗುರು ತೇಜ್ ಬಹದ್ದೂರ್ ಕಾಶ್ಮೀರಿ ಪಂಡಿತರ ಪರ ಹೋರಾಡಿ, ದಬ್ಬಾಳಿಕೆಯ ಮೊಘಲರ ವಿರುದ್ಧ ಧೈರ್ಯವಾಗಿ ನಿಂತು, ಧರ್ಮ–ಸಂಸ್ಕೃತಿಯ ರಕ್ಷಣೆಗೆ ಜೀವನ ತ್ಯಾಗ ಮಾಡಿದರು. ಅವರ ತ್ಯಾಗದ ಕಥೆ ಇಂದಿಗೂ ರಾಷ್ಟ್ರರಕ್ಷಣೆಯ ನವೀಕೃತ ಸಂಕಲ್ಪಕ್ಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa