ಶತಮಾನಗಳ ಗಾಯ ವಾಸಿಯಾಗಿದೆ : ಡಾ.ಮೋಹನ್ ಭಾಗವತ್
ಅಯೋಧ್ಯೆ, 25 ನವೆಂಬರ್ (ಹಿ.ಸ.) : ಆ್ಯಂಕರ್ : ಅಯೋಧ್ಯೆ ಶ್ರೀರಾಮ ಜನ್ಮಭೂಮಿ ದೇವಾಲಯದ ಮೇಲ್ಭಾಗದಲ್ಲಿ ಇಂದು ನಡೆದ ಐತಿಹಾಸಿಕ ಧ್ವಜಾರೋಹಣ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, “ಇಂದು ಶತಮಾನಗಳ ಗಾಯಗಳು ವಾಸಿಯಾಗಿವೆ, ಶತಮಾನಗಳ ಸಂಕಲ್ಪ ಈಡೇರಿದೆ” ಎಂದು ಹೇಳ
Bhagwat


ಅಯೋಧ್ಯೆ, 25 ನವೆಂಬರ್ (ಹಿ.ಸ.) :

ಆ್ಯಂಕರ್ : ಅಯೋಧ್ಯೆ ಶ್ರೀರಾಮ ಜನ್ಮಭೂಮಿ ದೇವಾಲಯದ ಮೇಲ್ಭಾಗದಲ್ಲಿ ಇಂದು ನಡೆದ ಐತಿಹಾಸಿಕ ಧ್ವಜಾರೋಹಣ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, “ಇಂದು ಶತಮಾನಗಳ ಗಾಯಗಳು ವಾಸಿಯಾಗಿವೆ, ಶತಮಾನಗಳ ಸಂಕಲ್ಪ ಈಡೇರಿದೆ” ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವನ್ನು ಅವರು ಧಾರ್ಮಿಕ, ಸಾಂಸ್ಕೃತಿಕ ಪುನರುಜ್ಜೀವನದ ಮಹತ್ವದ ಕ್ಷಣವೆಂದು ಬಣ್ಣಿಸಿದರು.

ಧ್ವಜಾರೋಹಣ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, “ರಾಮ ಮಂದಿರ ನಿರ್ಮಾಣಕ್ಕಾಗಿ ಅಸಂಖ್ಯಾತರು ತ್ಯಾಗ ಮಾಡಿದ್ದಾರೆ, ಇಂದು ಅವರ ಆತ್ಮಗಳು ತೃಪ್ತಿಗೊಂಡಿರಬೇಕು. ರಘುಕುಲದ ಸಂಕೇತವಾದ ಕೋವಿದರ್ ಮರ ಮತ್ತು ಸೂರ್ಯನ ಚಿಹ್ನೆಯನ್ನು ಹೊಂದಿರುವ ಈ ಕೇಸರಿ ಧ್ವಜವು ರಾಮರಾಜ್ಯದ ಮೌಲ್ಯಗಳ ಪ್ರತೀಕವಾಗಿದೆ” ಎಂದು ಹೇಳಿದರು.

“500 ವರ್ಷಗಳ ಹೋರಾಟದ ನಂತರ ಈ ಯಾಗ ಪೂರ್ಣಗೊಂಡಿದೆ. ಅಯೋಧ್ಯೆ ಇಂದು ಜಗತ್ತಿನ ಸಾಂಸ್ಕೃತಿಕ ಪ್ರಜ್ಞೆಯ ಕೇಂದ್ರವಾಗುತ್ತಿದೆ. ಕರುಣೆ, ದಯೆ ಮತ್ತು ಧರ್ಮದ ಸಂದೇಶವನ್ನು ಭಾರತ ಪ್ರಪಂಚಕ್ಕೆ ಸಾರುತ್ತಿದೆ” ಎಂದು ಅಭಿಪ್ರಾಯಪಟ್ಟರು.

ಧ್ವಜಾರೋಹಣಕ್ಕಿಂತ ಮುನ್ನ ಪ್ರಧಾನಿ ಮೋದಿ, ಭಾಗವತ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ರಾಮಲಲ್ಲಾ ಆಸ್ಥಾನದಲ್ಲಿ ವೇದಮಂತ್ರಗಳ ಪಠಣದ ನಡುವೆ ಪೂಜೆ ನೆರವೇರಿಸಿದರು. ನಂತರ, ಪ್ರಧಾನ ಮಂತ್ರಿಗಳು ವಿಧಾನಾನುಸಾರ ಗುಂಡಿಯನ್ನು ಒತ್ತುವ ಮೂಲಕ ಧ್ವಜಾರೋಹಣ ಮಾಡಿದರು.

ಯಾಗಕುಂಡಗಳ ಪರಿಮಳ, ಮಂತ್ರೋಚ್ಚಾರಣೆ ಮತ್ತು “ರಾಮ-ರಾಮ” ಧ್ವನಿಗಳ ನಡುವೆ ನಡೆದ ಕಾರ್ಯಕ್ರಮಕ್ಕೆ ಸುಮಾರು ಏಳು ಸಾವಿರಕ್ಕೂ ಹೆಚ್ಚು ಅತಿಥಿಗಳು ಸಾಕ್ಷಿಯಾದರು. ಧಾರ್ಮಿಕ ಮುಖಂಡರು, ಸಂತರು, ಉದ್ಯಮ ಕ್ಷೇತ್ರದ ಗಣ್ಯರು ಸೇರಿದಂತೆ ದಲಿತ, ವಂಚಿತ, ಟ್ರಾನ್ಸ್ಜೆಂಡರ್ ಹಾಗೂ ಅಘೋರಿ ಸಮುದಾಯಗಳ ಪ್ರತಿನಿಧಿಗಳು ಕೂಡ ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande