ಮೃತಪಟ್ಟ ನಕ್ಸಲರ ಪಟ್ಟಿ ಬಿಡುಗಡೆ ಮಾಡಿದ ಸಂಘಟನೆ
ಜಗದಲ್ಪುರ, 24 ನವೆಂಬರ್ (ಹಿ.ಸ.) : ಆ್ಯಂಕರ್ : ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ 25 ವರ್ಷಗಳ ಅಂಗವಾಗಿ ನಕ್ಸಲೈಟ್‌ಗಳ ಕೇಂದ್ರ ಮಿಲಿಟರಿ ಆಯೋಗವು 17 ಪುಟಗಳ ಕಿರುಪುಸ್ತಕವನ್ನು ಬಿಡುಗಡೆ ಮಾಡಿದ್ದು, ಕಳೆದ 11 ತಿಂಗಳಲ್ಲಿ 320 ನಕ್ಸಲರು ಕೊಲ್ಲಲ್ಪಟ್ಟಿದ್ದಾರೆ ಎಂದು ಬಹಿರಂಗಪಡಿಸಿದೆ. ಇವರಲ್ಲಿ 8
Naxal


ಜಗದಲ್ಪುರ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ 25 ವರ್ಷಗಳ ಅಂಗವಾಗಿ ನಕ್ಸಲೈಟ್‌ಗಳ ಕೇಂದ್ರ ಮಿಲಿಟರಿ ಆಯೋಗವು 17 ಪುಟಗಳ ಕಿರುಪುಸ್ತಕವನ್ನು ಬಿಡುಗಡೆ ಮಾಡಿದ್ದು, ಕಳೆದ 11 ತಿಂಗಳಲ್ಲಿ 320 ನಕ್ಸಲರು ಕೊಲ್ಲಲ್ಪಟ್ಟಿದ್ದಾರೆ ಎಂದು ಬಹಿರಂಗಪಡಿಸಿದೆ. ಇವರಲ್ಲಿ 8 ಕೇಂದ್ರ ಸಮಿತಿ ಸದಸ್ಯರು, 15 ರಾಜ್ಯ ಸಮಿತಿ ಸದಸ್ಯರು ಸೇರಿದ್ದಾರೆ. ಪಾಲಿಟ್‌ಬ್ಯೂರೋ ಸದಸ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜು ಮೃತಪಟ್ಟಿರುವುದು ಸಂಘಟನೆಗೆ ಅತಿದೊಡ್ಡ ನಷ್ಟವೆಂದು ನಕ್ಸಲರು ಹೇಳಿದ್ದಾರೆ.

ಕಿರುಪುಸ್ತಕದಲ್ಲಿ ಮಹಾರಾಷ್ಟ್ರದಲ್ಲಿ ಶರಣಾದ ಕೇಂದ್ರ ಸಮಿತಿ ಸದಸ್ಯ ಭೂಪತಿ ಹಾಗೂ ಬಸ್ತಾರ್‌ನಲ್ಲಿ ಶರಣಾದ ಸತೀಶ್ ಅವರನ್ನು ಮತ್ತೆ ದ್ರೋಹಿಗಳು ಎಂದು ಹಣೆಪಟ್ಟಿ ಹಾಕಲಾಗಿದೆ. ಇವರ ಮಾರ್ಗದರ್ಶನದಲ್ಲಿ 299 ನಕ್ಸಲರು ಶರಣಾಗಿ 227 ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಸಲ್ಲಿಸಿದರು ಎಂಬ ವಿವರ ನೀಡಲಾಗಿದೆ.

ಮಾವೋವಾದಿಗಳ ಪ್ರಮುಖ ಕಮಾಂಡರ್ ಹಿಡ್ಮಾ ಕೂಡ ಕೊಲ್ಲಲ್ಪಟ್ಟಿರುವುದಾಗಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ನಕ್ಸಲ್ ಸಂಘಟನೆ ಕಿರು ಪುಸ್ತಕದ ಕುರಿತು ಪ್ರತಿಕ್ರಿಯಿಸಿರುವ ಬಸ್ತಾರ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ.

“320 ನಕ್ಸಲರು ಸಾವನ್ನಪ್ಪಿರುವುದನ್ನು ಮಾವೋವಾದಿಗಳು ಸ್ವತಃ ಒಪ್ಪಿಕೊಂಡಿರುವುದು ಅವರ ಸಂಘಟನೆಯ ಆಳವಾದ ಬಿಕ್ಕಟ್ಟನ್ನು ತೋರಿಸುತ್ತದೆ. ಹಿಂಸೆಯನ್ನು ತ್ಯಜಿಸಿ ಮುಖ್ಯವಾಹಿನಿಗೆ ಮರಳುವವರಿಗೆ ಪುನರ್ವಸತಿ, ಭದ್ರತೆ ಮತ್ತು ಪ್ರಗತಿಯ ದಾರಿ ತೆರೆದಿದೆ, ನಕ್ಸಲರು ಶಸ್ತ್ರತ್ಯಾಗ ಮಾಡಿ ಗೌರವಯುತ ಬದುಕಿಗಾಗಿ ಮುಖ್ಯವಾಹಿನಿಗೆ ಸೇರುವಂತೆ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande