ವಿದೇಶ‌ ಪ್ರವಾಸದಿಂದ ಸ್ವದೇಶಕ್ಕೆ ಮರಳಿದ ಪ್ರಧಾನಿ ಮೋದಿ
ನವದೆಹಲಿ, 24 ನವೆಂಬರ್ (ಹಿ.ಸ.) : ಆ್ಯಂಕರ್ : ಮೂರು ದಿನಗಳ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು ಸ್ವದೇಶಕ್ಕೆ ಮರಳಿದರು. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಅವರು ಕೃತಕ ಬುದ್ಧಿಮತ್ತೆ ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದದ ಅಗ
Pm


ನವದೆಹಲಿ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಮೂರು ದಿನಗಳ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು ಸ್ವದೇಶಕ್ಕೆ ಮರಳಿದರು.

ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಅವರು ಕೃತಕ ಬುದ್ಧಿಮತ್ತೆ ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದದ ಅಗತ್ಯವನ್ನು ಒತ್ತಿ ಹೇಳಿದರು. ನಿರ್ಣಾಯಕ ತಂತ್ರಜ್ಞಾನಗಳು ಹಣಕಾಸು ಕೇಂದ್ರಿತವಾಗಿರದೆ ಮಾನವ ಕೇಂದ್ರಿತವಾಗಿರಬೇಕು ಎಂದೂ ಮನದಟ್ಟು ಮಾಡಿದರು.

ಮೋದಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಜಿ-20 ಶೃಂಗಸಭೆ ಯಶಸ್ವಿಯಾಗಿ ನಡೆದಿದ್ದು, “ಸಮೃದ್ಧ ಮತ್ತು ಸುಸ್ಥಿರ ಗ್ರಹಕ್ಕೆ ಕೊಡುಗೆ ನೀಡಲಿದೆ” ಎಂದು ಹೇಳಿದ್ದಾರೆ. ಜಗತ್ತಿನ ಹಲವು ನಾಯಕರೊಂದಿಗೆ ನಡೆದ ಅವರ ಸಂವಾದಗಳು ದ್ವಿಪಕ್ಷೀಯ ಸಂಬಂಧಗಳನ್ನು ಗಾಢಗೊಳಿಸಿರುವುದಾಗಿ ಹೇಳಿದ್ದಾರೆ.

ಪ್ರಧಾನಿ ಮೋದಿ ಬ್ರಿಟನ್ ಪ್ರಧಾನಿ ಸ್ಟಾರ್ಮರ್, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್, ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ-ಮ್ಯುಂಗ್, ಬ್ರೆಜಿಲ್ ಅಧ್ಯಕ್ಷ ಲುಲಾ, ಕೆನಡಾ ಪ್ರಧಾನಿ ಕಾರ್ನಿ, ಜಪಾನ್ ಪ್ರಧಾನಿ ಸನೇ ತಕೈಚಿ, ಇಟಲಿ ಪ್ರಧಾನಿ ಮೆಲೋನಿ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷ ರಾಮಾಫೋಸಾ ಸೇರಿದಂತೆ ಹಲವು ನಾಯಕರನ್ನು ಭೇಟಿಯಾಗಿದ್ದರು.

ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ‘ಗಂಗಾ ಮೈಯಾ’ ಕಾರ್ಮಿಕ ಗೀತೆಯ ತಮಿಳು ರೂಪಾಂತರವು ಮನಮೋಹಕವಾಗಿತ್ತು ಎಂದು ಮೋದಿ ತಿಳಿಸಿದ್ದಾರೆ. ದಶಕಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನೆಲಸಿದ ಭಾರತೀಯರ ಸಂಕಲ್ಪ, ಹೋರಾಟ ಮತ್ತು ಭಾರತಕ್ಕೆ ಇರುವ ಸಾಂಸ್ಕೃತಿಕ ಬಾಂಧವ್ಯವನ್ನು ಈ ಹಾಡು ಪ್ರತಿಬಿಂಬಿಸುತ್ತದೆ ಎಂದೂ ಅವರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande