
ಕುರುಕ್ಷೇತ್ರ, 24 ನವೆಂಬರ್ (ಹಿ.ಸ.) :
ಆ್ಯಂಕರ್ : ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರರಾಷ್ಟ್ರೀಯ ಗೀತಾ ವಿಚಾರ ಸಂಕಿರಣದಲ್ಲಿ ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿ ಮಾತನಾಡಿದರು. ಪಹಲ್ಗಾಮ್‌ನಲ್ಲಿ ವ್ಯಕ್ತಿಯೊಬ್ಬನ ಧರ್ಮ ವಿಚಾರಿಸಿದ ಬಳಿಕ ನಡೆದ ಅಮಾಯಕ ಪ್ರವಾಸಿಗನ ಹತ್ಯೆ ದೇಶದ ಮನಸ್ಸನ್ನು ಇನ್ನೂ ಕಾಡುತ್ತಿದೆ ಎಂದು ಅವರು ಹೇಳಿದರು.
ಭಾರತದ ಶಾಂತಿಪ್ರಿಯತೆ ಮತ್ತು ಸಂಸ್ಕೃತಿಯನ್ನು ಭಯೋತ್ಪಾದಕರು ದೌರ್ಬಲ್ಯವೆಂದು ತಪ್ಪಾಗಿ ಅರ್ಥೈಸಿದರೂ, ಆಪರೇಷನ್ ಸಿಂಧೂರ್ ಮೂಲಕ ಭಾರತ ಸ್ಪಷ್ಟವಾದ ಮತ್ತು ದೃಢ ಪ್ರತಿಕ್ರಿಯೆ ನೀಡಿದೆ ಎಂದು ರಕ್ಷಣಾ ಸಚಿವರು ಉಲ್ಲೇಖಿಸಿದರು. ಕುರುಕ್ಷೇತ್ರವೇ ಗೀತೆಯ ಭೂಮಿಯಾಗಿದ್ದು, ಧರ್ಮರಕ್ಷಣೆಗೆ ಕ್ರಿಯೆಯೇ ಪ್ರಮುಖ ಎನ್ನುವ ಶ್ರೀಕೃಷ್ಣನ ಸಂದೇಶವನ್ನು ಭಾರತ ಸದಾ ಅನುಸರಿಸುತ್ತಿದೆ ಎಂದು ಅವರು ಹೇಳಿದರು.
ಗೀತೆಯು ಸಂಕಷ್ಟಕಾಲದಲ್ಲಿ ಧೈರ್ಯ, ಕರ್ತವ್ಯಪ್ರಜ್ಞೆ ಮತ್ತು ಆತ್ಮಾವಲೋಕನಕ್ಕೆ ದಾರಿದೀಪವಾಗಿರುವ ಶಾಶ್ವತ ಪಠ್ಯ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa