ಹಿಜ್ಬೊಲ್ಲಾ ಸೇನಾ ಮುಖ್ಯಸ್ಥ ಹೈತಮ್ ಅಲಿ ತಬತಾಬಾಯಿ ಹತ್ಯೆ
ಬೈರುತ್, 24 ನವೆಂಬರ್ (ಹಿ.ಸ.) : ಆ್ಯಂಕರ್ : ಲೆಬನಾನ್‌ನ ಬೈರುತ್ ದಕ್ಷಿಣ ಉಪನಗರಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾ ಸೇನಾ ಮುಖ್ಯಸ್ಥ ಹೈತಮ್ ಅಲಿ ತಬತಾಬಾಯಿ ಕೊಲ್ಲಲ್ಪಟ್ಟಿದ್ದಾರೆ. ಸೆಕ್ರೆಟರಿ ಜನರಲ್ ನಯಿಮ್ ಖಾಸೆಮ್ ನಂತರ ಸಂಘಟನೆಯ ಎರಡನೇ ಅತಿ ಪ್ರಮುಖ ನಾಯಕನಾಗಿದ್ದ ಅವರು
ಹಿಜ್ಬೊಲ್ಲಾ ಸೇನಾ ಮುಖ್ಯಸ್ಥ ಹೈತಮ್ ಅಲಿ ತಬತಾಬಾಯಿ ಹತ್ಯೆ


ಬೈರುತ್, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಲೆಬನಾನ್‌ನ ಬೈರುತ್ ದಕ್ಷಿಣ ಉಪನಗರಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾ ಸೇನಾ ಮುಖ್ಯಸ್ಥ ಹೈತಮ್ ಅಲಿ ತಬತಾಬಾಯಿ ಕೊಲ್ಲಲ್ಪಟ್ಟಿದ್ದಾರೆ. ಸೆಕ್ರೆಟರಿ ಜನರಲ್ ನಯಿಮ್ ಖಾಸೆಮ್ ನಂತರ ಸಂಘಟನೆಯ ಎರಡನೇ ಅತಿ ಪ್ರಮುಖ ನಾಯಕನಾಗಿದ್ದ ಅವರು ರಾಡ್ವಾನ್ ಪಡೆಗಳು ಮತ್ತು ಸಿರಿಯಾ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿದ್ದರು.

ಹರೆತ್ ಹ್ರೈಕ್ ಪ್ರದೇಶದಲ್ಲಿರುವ ಒಂಬತ್ತು ಅಂತಸ್ತಿನ ಕಟ್ಟಡದ ಮೇಲೆ ಮೂರು ಕ್ಷಿಪಣಿಗಳನ್ನು ಹಾರಿಸಲಾಗಿದ್ದು, ಕಟ್ಟಡ ಹಾಗೂ ಹತ್ತಿರದ ಪ್ರದೇಶಕ್ಕೆ ಹಾನಿಯಾಗಿದೆ. ಒಂದು ಸಾವಿನ ಪ್ರಕರಣ ಮತ್ತು 21 ಮಂದಿ ಗಾಯಗೊಂಡಿರುವುದನ್ನು ಲೆಬನಾನ್ ಆರೋಗ್ಯ ಸಚಿವಾಲಯ ದೃಢಪಡಿಸಿದೆ.

ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ, ತಬತಾಬಾಯಿ ಹಿಜ್ಬೊಲ್ಲಾದ ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಮಿಲಿಟರಿ ಸಾಮರ್ಥ್ಯವನ್ನು ಮುನ್ನಡೆಸುತ್ತಿದ್ದ ಕಾರಣ ಅವರನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಘೋಷಿಸಿದೆ. ಇತ್ತೀಚಿನ ವಾರಗಳಲ್ಲಿ ಹಿಜ್ಬೊಲ್ಲಾ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಯತ್ನಿಸುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande