ಅಯೋಧ್ಯೆಯಲ್ಲಿ ನಾಳೆ ಐತಿಹಾಸಿಕ ಧ್ವಜಾರೋಹಣ ಸಮಾರಂಭ
ಅಯೋಧ್ಯೆ, 24 ನವೆಂಬರ್ (ಹಿ.ಸ.) : ಆ್ಯಂಕರ್ : ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಮಂಗಳವಾರ ನಡೆಯಲಿರುವ ಐತಿಹಾಸಿಕ ಧ್ವಜಾರೋಹಣ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಮೂಲಕ ದೇವಾಲಯದ ಶಿಖರದಲ್ಲಿ ಕೇಸರಿ ಧ್ವಜಾರೋಹಣದ ಮೂಲಕ
Ayodya flag


ಅಯೋಧ್ಯೆ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಮಂಗಳವಾರ ನಡೆಯಲಿರುವ ಐತಿಹಾಸಿಕ ಧ್ವಜಾರೋಹಣ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಮೂಲಕ ದೇವಾಲಯದ ಶಿಖರದಲ್ಲಿ ಕೇಸರಿ ಧ್ವಜಾರೋಹಣದ ಮೂಲಕ ಹೊಸ ಸಾಂಸ್ಕೃತಿಕ ಅಧ್ಯಾಯಕ್ಕೆ ಆರಂಭವಾಗಲಿದೆ.

ಪ್ರಧಾನಿ ಕಚೇರಿಯ ಮಾಹಿತಿಯ ಪ್ರಕಾರ, ಪ್ರಧಾನಿ ಮೋದಿ ಅವರು ನವೆಂಬರ್ 25 ರಂದು ಬೆಳಿಗ್ಗೆ ಅಯೋಧ್ಯೆ ತಲುಪಲಿದ್ದು, ಅವರನ್ನು ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಲಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ಅವರು ಮಹರ್ಷಿ ವಶಿಷ್ಠ, ವಿಶ್ವಾಮಿತ್ರ, ಅಗಸ್ತ್ಯ, ವಾಲ್ಮೀಕಿ, ದೇವಿ ಅಹಲ್ಯಾ, ನಿಷಾದರಾಜ್ ಗುಹಾ ಮತ್ತು ಮಾತಾ ಶಬರಿಗೆ ಸಮರ್ಪಿತ ಸಪ್ತಮಂದಿರ ಸಂಕೀರ್ಣಕ್ಕೆ ಭೇಟಿ ನೀಡಲಿದ್ದಾರೆ. ನಂತರ ಅವರು ಶೇಷಾವತಾರ ದೇವಸ್ಥಾನ ಮತ್ತು ಮಾತಾ ಅನ್ನಪೂರ್ಣ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.

ನಂತರ ರಾಮ ದರ್ಬಾರ್ ಗರ್ಭಗೃಹ, ನಂತರ ರಾಮಲಲ್ಲಾ ಗರ್ಭಗೃಹಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಮಧ್ಯಾಹ್ನ ಸುಮಾರು 12 ಗಂಟೆಗೆ, ಪ್ರಧಾನಿ ಮೋದಿ ಅವರು ಶ್ರೀ ರಾಮ ಜನ್ಮಭೂಮಿ ದೇವಾಲಯದ ಶಿಖರದಲ್ಲಿ ಕೇಸರಿ ಧ್ವಜಾರೋಹಣ ಮಾಡಲಿದ್ದಾರೆ.

10 ಅಡಿ ಎತ್ತರ ಮತ್ತು 20 ಅಡಿ ಉದ್ದದ ಈ ಪವಿತ್ರ ಕೇಸರಿ ಧ್ವಜದ ಮೇಲೆ ಹೊಳೆಯುವ ಸೂರ್ಯ, ಓಂ ಶಾಸನ ಹಾಗೂ ಕೋವಿದಾರ ಮರದ ಸಂಕೇತಗಳನ್ನು ಚಿತ್ರಿಸಲಾಗಿದೆ. ಇದು ರಾಮರಾಜ್ಯದ ಮೌಲ್ಯಗಳನ್ನು ಪ್ರತಿನಿಧಿಸುವ ಘನತೆ, ಏಕತೆ ಮತ್ತು ಸಾಂಸ್ಕೃತಿಕ ನಿರಂತರತೆಯ ಸಂದೇಶವನ್ನು ಹೊತ್ತಿದೆ.

ದೇವಾಲಯದ ಶಿಖರವು ಸಾಂಪ್ರದಾಯಿಕ ಉತ್ತರ ಭಾರತೀಯ ನಾಗರ ಶೈಲಿಯಲ್ಲಿ ನಿರ್ಮಾಣವಾಗಿದ್ದು, ಸುತ್ತಲಿನ 800 ಮೀ. ಪ್ರದಕ್ಷಿಣಾ ವಲಯವು ದಕ್ಷಿಣ ಭಾರತದ ವಾಸ್ತುಶಿಲ್ಪ ಸಂಪ್ರದಾಯವನ್ನು ಆಧರಿಸಿದೆ.

ಸಂಕೀರ್ಣದ ಗೋಡೆಗಳಲ್ಲಿ ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ 87 ಕಲ್ಲಿನ ಕೆತ್ತನೆ ದೃಶ್ಯಗಳು, ಹಾಗೂ ಆವರಣ ಗೋಡೆಗಳಲ್ಲಿ 79 ಕಂಚಿನ ಶಿಲ್ಪಗಳು ಅಳವಡಿಸಲಾಗಿದ್ದು, ಭಗವಾನ್ ಶ್ರೀರಾಮನ ಜೀವನ ಮತ್ತು ಭಾರತೀಯ ಸಂಸ್ಕೃತಿಯ ಸಮಗ್ರ ಚಿತ್ರಣವನ್ನು ನೀಡುತ್ತವೆ.

ಧ್ವಜಾರೋಹಣ ಸಮಾರಂಭವು ಮಾರ್ಗಶಿರ ಶುಕ್ಲ ಪಂಚಮಿ, ಅಂದರೆ ‘ವಿವಾಹ ಪಂಚಮಿ’ ಎಂಬ ಶುಭ ದಿನದಂದು ನಡೆಯಲಿದೆ. ಇದೇ ದಿನ ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನವೂ ಆಗಿದ್ದು, ಅವರು ಅಯೋಧ್ಯೆಯಲ್ಲಿ 48 ಗಂಟೆಗಳ ಕಾಲ ನಿರಂತರ ಧ್ಯಾನ ಮಾಡಿದ ಹಿನ್ನೆಲೆಯಲ್ಲಿ ಈ ಸಂದರ್ಭಕ್ಕೆ ಮತ್ತಷ್ಟು ಆಧ್ಯಾತ್ಮಿಕ ಮಹತ್ವ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande