ಬಳ್ಳಾರಿ : ಗೃಹರಕ್ಷಕರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್
ಬಳ್ಳಾರಿ, 24 ನವೆಂಬರ್ (ಹಿ.ಸ.) : ಆ್ಯಂಕರ್ : ಬೆಂಗಳೂರಿನ ಬನ್ನೇರುಘಟ್ಟದ ಮುಂಡ್ಕೂರ್ ತರಬೇತಿ ಅಕಾಡೆಮಿ ಮೈದಾನದಲ್ಲಿ ನಡೆದ 2025-26ನೇ ಸಾಲಿನ ಗೃಹರಕ್ಷಕರ ರಾಜ್ಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟಗಳಲ್ಲಿ ಬಳ್ಳಾರಿ ಜಿಲ್ಲೆಯ ಕ್ರೀಡಾಪಟುಗಳ ತಂಡ ಚಾಂಪಿಯನ್‍ಶಿಪ್ ಕಪ್ ಮುಡಿಗೇರಿಸಿಕೊ
ಬಳ್ಳಾರಿ : ಗೃಹರಕ್ಷಕರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್


ಬಳ್ಳಾರಿ : ಗೃಹರಕ್ಷಕರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್


ಬಳ್ಳಾರಿ : ಗೃಹರಕ್ಷಕರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್


ಬಳ್ಳಾರಿ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ಬನ್ನೇರುಘಟ್ಟದ ಮುಂಡ್ಕೂರ್ ತರಬೇತಿ ಅಕಾಡೆಮಿ ಮೈದಾನದಲ್ಲಿ ನಡೆದ 2025-26ನೇ ಸಾಲಿನ ಗೃಹರಕ್ಷಕರ ರಾಜ್ಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟಗಳಲ್ಲಿ ಬಳ್ಳಾರಿ ಜಿಲ್ಲೆಯ ಕ್ರೀಡಾಪಟುಗಳ ತಂಡ ಚಾಂಪಿಯನ್‍ಶಿಪ್ ಕಪ್ ಮುಡಿಗೇರಿಸಿಕೊಂಡಿದೆ.

ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹೆಚ್ಚುವರಿ ಮಹಾ ನಿರ್ದೇಶಕ ನಂಜುಂಡಸ್ವಾಮಿ ಅವರು ಕಪ್ ವಿತರಣೆ ಮಾಡಿದರು.

ಈಶಾನ್ಯ ವಲಯದ ವೃತ್ತಿಪರ ಕ್ರೀಡೆಗಳಾದ ರೈಫಲ್ ಡ್ರಿಲ್, ರಕ್ಷಣೆಯಲ್ಲಿ ಪುರುಷರ ವಿಭಾಗವು ಪ್ರಥಮ ಸ್ಥಾನ ಮತ್ತು ಮಹಿಳಾ ವಿಭಾಗವು ಪ್ರಥಮ ಚಿಕಿತ್ಸೆಯಲ್ಲಿ ಪ್ರಥಮ ಸ್ಥಾನ ಮತ್ತು ರೈಫಲ್‍ಡ್ರಿಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕ್ರೀಡಾಕೂಟಗಳಲ್ಲಿ ಕ್ರೀಡೆಗಳಾದ 100 ಮೀ. ಓಟ, 400 ಮೀ. ಓಟ, 800 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ ಮತ್ತು ವೃತ್ತಿಪರ ಕ್ರೀಡೆಗಳಾದ ಪ್ರಥಮ ಚಿಕಿತ್ಸೆ, ಆಗ್ನಿಶಮನ, ರೈಫಲ್ ಡ್ರಿಲ್, ರಕ್ಷಣೆ ಮತ್ತು ರೈಫಲ್ ಸಹಿತ ಶೂಟಿಂಗ್ ಸ್ಪರ್ಧೆಗಳಲ್ಲಿ ್ಲ ಈಶಾನ್ಯ ವಲಯದ 65 ಜನ ಗೃಹರಕ್ಷಕರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande