
ನೈನಿತಾಲ್, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಭವಾಲಿ–ಅಲ್ಮೋರಾ ರಾಷ್ಟ್ರೀಯ ಹೆದ್ದಾರಿ 109 ರ ರಾತಿಘಾಟ್ ಬಳಿ ಶನಿವಾರ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ಶಿಕ್ಷಕ ನಾಯಕರು ಸಾವನ್ನಪ್ಪಿ, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮದುವೆಗೆ ತೆರಳುತ್ತಿದ್ದ ಎಸ್‌ಯುವಿ ನಿಯಂತ್ರಣ ತಪ್ಪಿ ಕಂದರಕ್ಕೆ ಬಿದ್ದು ಶಿಪ್ರಾ ನದಿಗೆ ಉರುಳಿದುದರಿಂದ ದುರಂತ ಸಂಭವಿಸಿದೆ.
ಸುರೇಂದ್ರ ಭಂಡಾರಿ, ಪುಷ್ಕರ್ ಭೈಸೋರಾ ಮತ್ತು ಸಂಜಯ್ ಬಿಶ್ತ್ ಸ್ಥಳದಲ್ಲೇ ಮೃತಪಟ್ಟರೆ, ಮನೋಜ್ ಕುಮಾರ್ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು, ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯರು ರಾತ್ರಿ ಇಡಿ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa