
ಭೋಪಾಲ್, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶದ ಬುಂದೇಲ್‌ಖಂಡದ ಪ್ರಸಿದ್ಧ ಧಾರ್ಮಿಕ ನಗರ ಓರ್ಛಾದಲ್ಲಿ ಶ್ರೀ ರಾಮ–ಜಾನಕಿ ವಿವಾಹ ಮಹೋತ್ಸವದ ಸಿದ್ಧತೆಗಳು ಪೂರ್ಣಗೊಂಡಿದ್ದು, ಇಂದು ಸಂಜೆ, ಬೇತ್ವಾ ನದಿಯ ಕಾಂಚನ ಘಾಟ್‌ನಲ್ಲಿ ಒಂದೂವರೆ ಲಕ್ಷ ದೀಪಗಳನ್ನು ಬೆಳಗಿಸುವ ದೀಪೋತ್ಸವ ನಡೆಯಲಿದೆ.
ಪ್ರತಿ ವರ್ಷ ನಡೆಯುವ 3 ದಿನಗಳ ಶ್ರೀ ರಾಮ ವಿವಾಹ ಮಹೋತ್ಸವಕ್ಕಾಗಿ ಓರ್ಛಾವನ್ನು ವಧು ನಗರಿಯಂತೆ ಅಲಂಕರಿಸಿ ಬುಂದೇಲಿ ಸಂಪ್ರದಾಯ, ರಾಜ ವೈಭವ ಮತ್ತು ಸಾಂಸ್ಕೃತಿಕ ಮೆರಗುಗಳೊಂದಿಗೆ ಆಯೋಜಿಸಲಾಗಿದೆ. ಸಾವಿರಾರು ಭಕ್ತರು ನಗರಕ್ಕೆ ಆಗಮಿಸಿದ್ದು, ಇಡೀ ಪ್ರದೇಶದ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa