ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆದ ‘ಚಂಬಲ್’ ನಾನ್-ಫೀಚರ್ ಚಿತ್ರ
ಪಣಜಿ, 23 ನವೆಂಬರ್ (ಹಿ.ಸ.): ಆ್ಯಂಕರ್:ಮಧ್ಯಪ್ರದೇಶದ ಮೊರೆನಾ, ಭಿಂದ್, ಶಿಯೋಪುರ್, ಗ್ವಾಲಿಯರ್ ಮತ್ತು ದಾಟಿಯಾ ಜಿಲ್ಲೆಗಳ ಸಾಮಾಜಿಕ-ಸಾಂಸ್ಕೃತಿಕ ವಾಸ್ತವಿಕತೆಯನ್ನು ಬಿಂಬಿಸುವ ಯುವ ನಿರ್ದೇಶಕ ಅನ್ಹಾದ್ ಮಿಶ್ರಾ ಅವರ ‘ಚಂಬಲ್’ ನಾನ್-ಫೀಚರ್ ಚಿತ್ರವು ಇಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ
Film fest


ಪಣಜಿ, 23 ನವೆಂಬರ್ (ಹಿ.ಸ.):

ಆ್ಯಂಕರ್:ಮಧ್ಯಪ್ರದೇಶದ ಮೊರೆನಾ, ಭಿಂದ್, ಶಿಯೋಪುರ್, ಗ್ವಾಲಿಯರ್ ಮತ್ತು ದಾಟಿಯಾ ಜಿಲ್ಲೆಗಳ ಸಾಮಾಜಿಕ-ಸಾಂಸ್ಕೃತಿಕ ವಾಸ್ತವಿಕತೆಯನ್ನು ಬಿಂಬಿಸುವ ಯುವ ನಿರ್ದೇಶಕ ಅನ್ಹಾದ್ ಮಿಶ್ರಾ ಅವರ ‘ಚಂಬಲ್’ ನಾನ್-ಫೀಚರ್ ಚಿತ್ರವು ಇಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡು ವಿಶಿಷ್ಟ ಗಮನ ಸೆಳೆದಿದೆ.

33 ನಿಮಿಷಗಳ ಅವಧಿಯ ಈ ಚಿತ್ರವು ಬಂದೂಕುಗಳ ನೆರಳಿನಲ್ಲಿ ಬದುಕುತ್ತಿರುವ ಚಂಬಲ್ ಪ್ರದೇಶದ ಸಂಪ್ರದಾಯ, ಗೌರವ, ಹಿಂಸೆ ಮತ್ತು ಸಾಮಾಜಿಕ ಮನೋವೃತ್ತಿಗಳ ನಡುವಿನ ಸಂಕೀರ್ಣ ಸಂಬಂಧವನ್ನು ಅನಾವರಣಗೊಳಿಸುತ್ತದೆ. ಡಕಾಯಿ ಸಂಸ್ಕೃತಿಗೆ ಹೆಸರುವಾಸಿಯಾಗಿದ್ದ ಈ ಭೌಗೋಳಿಕತೆ ಇಂದಿಗೂ ಶಸ್ತ್ರಾಸ್ತ್ರಗಳನ್ನು ಪ್ರತಿಷ್ಠೆ, ಶಕ್ತಿ ಮತ್ತು ಪ್ರಭಾವದ ಸಂಕೇತವಾಗಿ ಕಂಡುಕೊಳ್ಳುತ್ತದೆ.

ಚಿತ್ರದ ನಿರ್ದೇಶಕ ಅನ್ಹದ್ ಮಿಶ್ರಾ ಅವರ ಪ್ರಕಾರ, “ಚಂಬಲ್ ಕೇವಲ ಒಂದು ಚಲನಚಿತ್ರವಲ್ಲ; ಇದು ಇತಿಹಾಸ, ಭಯ, ಹೆಮ್ಮೆ ಮತ್ತು ಸಾಮಾಜಿಕ ನೆನಪುಗಳ ಆತ್ಮಚರಿತ್ರೆ”. ಆಯುಧ ಪೂಜೆ, ಮದುವೆ ಸಂಪ್ರದಾಯಗಳು, ಸ್ಥಳೀಯ ರಾಜಕೀಯ—ಎಲ್ಲವೂ ಬಂದೂಕಿನ ಪ್ರಭಾವವು ದೈನಂದಿನ ಜೀವನದಲ್ಲಿ ಶಾಶ್ವತವಾಗಿ ಇರುವುದು ಚಿತ್ರವು ಸೂಕ್ಷ್ಮವಾಗಿ ಬಿಂಬಿಸುತ್ತದೆ.

ಕ್ಯಾಮೆರಾ ಚಂಬಲ್ ಕಣಿವೆಯ ಒರಟಾದ ಭೂದೃಶ್ಯವನ್ನು—ಪೊದೆಗಳು, ಡಾಂಬರು ಹಾಕದ ದಾರಿಗಳು, ಧೂಳಿನ ವಾತಾವರಣ ಮತ್ತು ಶಸ್ತ್ರಾಸ್ತ್ರಗಳ ಹೊಳಪಿನ ಮಧ್ಯೆ ಬದುಕುತ್ತಿರುವ ಜನರ ವಾಸ್ತವವನ್ನು—ವೈಭವೀಕರಿಸದೆ, ಆರೋಪಿಸದೆ, ಕೇವಲ ಸಾಕ್ಷಿಯಂತೆ ದಾಖಲಿಸುತ್ತದೆ. ಸ್ಥಳೀಯರ ಧ್ವನಿಗಳು, ಅವರ ನಂಬಿಕೆಗಳು ಮತ್ತು ತಲೆಮಾರುಗಳಿಂದ ಬಂದಿರುವ ‘ಗೌರವ’ ಪರಿಕಲ್ಪನೆಗಳು ಭಾರತದ ಸಮಾಜದಲ್ಲಿನ ಗುರುತು, ಅಪರಾಧ ಮತ್ತು ಸಂಪ್ರದಾಯದ ಕುರಿತ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ.

ಸಂಘಟಿತ ಅಪರಾಧ, ಚುನಾವಣಾ ಪ್ರಚಾರಗಳಲ್ಲಿ ಶಸ್ತ್ರಾಸ್ತ್ರಗಳ ಪ್ರದರ್ಶನ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿನ ಬಂದೂಕು ಸಂಪ್ರದಾಯಕ್ಕೆ ಹೊಸ ರೂಪ ಸಿಗುತ್ತಿರುವ ಸಂದರ್ಭದಲ್ಲಿ ‘ಚಂಬಲ್’ ಅತ್ಯಂತ ಪ್ರಸ್ತುತವಾದ ಚಿತ್ರವಾಗಿದೆ ಎಂದು ನಿರ್ದೇಶಕ ಹೇಳುತ್ತಾರೆ.

ಸಂಯೋಜಕ ನಿನಾದ್ ಪರಬ್ ಅವರ ಸಂಗೀತ, ಸಮತೋಲನಗೊಂಡ ಸಂಕಲನ ಹಾಗೂ ನಿರೂಪಣೆಯ ಪ್ರಾಮಾಣಿಕತೆಯೊಂದಿಗೆ ಈ ಚಿತ್ರವು ಚಿಂತನಶೀಲ ಅನುಭವವನ್ನು ನೀಡುತ್ತದೆ.

‘ಚಂಬಲ್’ ಬಂದೂಕುಗಳ ಗದ್ದಲದ ಹಿಂದೆ ಅಡಗಿರುವ ಸಾಮಾಜಿಕ ಪ್ರಶ್ನೆಗಳನ್ನು ಕಲಾತ್ಮಕವಾಗಿ ತೆರೆದಿಡುವ ಮೇರುಕೃತಿ ಎಂದು ವಿಮರ್ಶಕರು ಶ್ಲಾಘಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande