
ಹಾಸನ, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 2025-26ನೇ ಸಾಲಿನಲ್ಲಿ ಯು ಡೈಸ್ ಮಾಹಿತಿಯಂತೆ ಎಲ್.ಕೆ.ಜಿ ಯಿಂದ 12ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿಶೇಷ ಚೇತನ ಮಕ್ಕಳಿಗೆ ದೃಷ್ಠಿದೋಷ, ಶ್ರವಣದೋಷ, ದೈಹಿಕ ನ್ಯೂನತೆ(ಸಿ.ಪಿ, ಬಹುವಿಕಲತೆ, ಮಸ್ಕುö್ಯಲರ್ ಡಿಸ್ಟೋಪಿ), ಬೌದ್ಧಿಕ ವಿಕಲತೆ ಈ ನ್ಯೂನತೆ ಹೊಂದಿರುವ ಮಕ್ಕಳಿಗೆ ವೈದ್ಯಕೀಯ (ತಪಾಸಣೆ) ಮೌಲ್ಯಾಂಕನ ಶಿಬಿರವನ್ನು (MEDICAL CAMP ಅಂಒP ನ.29 ರಂದು ಶನಿವಾರ ಬೆಳಗ್ಗೆ 09.30 ಗಂಟೆಗೆ “ಕ್ಷೇತ್ರ ಸಂಪನ್ಮೂಲ ಕೇಂದ್ರ” ಹಾಸನ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜಿನ ಮೇಲ್ಕಂಡ ನ್ಯೂನತೆ ಇರುವ ಮಕ್ಕಳನ್ನು ಪೋಷಕರು ಶಿಬಿರಕ್ಕೆ ಕರೆದುಕೊಂಡು ಬಂದು ಶಿಬಿರದ ಸೌಲಭ್ಯ ಪಡೆದುಕೊಳ್ಳುವಂತೆ ಹಾಸನ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa