ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಎಲ್‍ಇಎಎನ್ ಕಾರ್ಯಕ್ರಮ
ಧಾರವಾಡ, 23 ನವೆಂಬರ್ (ಹಿ.ಸ.) : ಆ್ಯಂಕರ್ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ಸಹಯೋಗದಲ್ಲಿ ಜಿಲ್ಲೆಯ ಎಂಎಸ್‍ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದಕ್ಕೆ ಆರ್‍ಎಎಮ್‍ಪಿ ಯೋಜನೆಯಡಿಯಲ್ಲಿ ಝಡ್‍ಇಡಿ
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಎಲ್‍ಇಎಎನ್ ಕಾರ್ಯಕ್ರಮ


ಧಾರವಾಡ, 23 ನವೆಂಬರ್ (ಹಿ.ಸ.) :

ಆ್ಯಂಕರ್ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ಸಹಯೋಗದಲ್ಲಿ ಜಿಲ್ಲೆಯ ಎಂಎಸ್‍ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದಕ್ಕೆ ಆರ್‍ಎಎಮ್‍ಪಿ ಯೋಜನೆಯಡಿಯಲ್ಲಿ ಝಡ್‍ಇಡಿ ಮತ್ತು ಎಲ್‍ಇಎಎನ್ (ZED & LEAN) ವಿಶೇಷ ಕಾರ್ಯಕ್ರಮವನ್ನು ನವೆಂಬರ್ 25, 2025 ರಂದು ಬೆಳಿಗ್ಗೆ 10:30 ಗಂಟೆಗೆ ಧಾರವಾಡದ ಮಸ್ಟಿಪ್ ಗ್ರ್ಯಾಂಡ್ ಹೊಟೇಲ್‍ದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಶೂನ್ಯ ದೋಷ-ಶೂನ್ಯ ಪರಿಣಾಮ (Zero Defect Zero Effect) ಉತ್ಪಾದನಾ ವಿಧಾನ, ಎಲ್‍ಇಎಎನ್ ಉತ್ಪಾದನಾ ಕ್ರಮಗಳ ಕುರಿತು ಎಂಎಸ್‍ಎಂಇ ಯೋಜನೆಯಡಿ ಲಭ್ಯವಿರುವ ನೆರವು ಕುರಿತು ತಜ್ಞರಿಂದ ಮಾರ್ಗದರ್ಶನ, ಉಪನ್ಯಾಸ ಹಾಗೂ ಸಂವಾದಗಳು ಜರಗುತ್ತವೆ.

ಕಾರ್ಯಕ್ರಮವನ್ನು ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಉದ್ಘಾಟಿಸುವರು. ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಜಿ.ಕೆ ಆದಪ್ಪಗೌಡರ, ಧಾರವಾಡ ಬೇಲೂರಿನ ಗ್ರೋಥ್ ಸೆಂಟರ್ ಕೈಗಾರಿಕಾ ಸಂಘದ ಅಧ್ಯಕ ಶ್ರೀಕಾಂತ ಥಿಟೆ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳವರು ಹಾಗೂ ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಗಣೇಶ ರಾವ್ ಬಿ.ಆರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲೆಯ ಕೈಗಾರಿಕೋದ್ಯಮಿಗಳು, ಕೈಗಾರಿಕಾ ಸಂಘಗಳ ಸದಸ್ಯರು ಹಾಗೂ MSME ವಲಯದ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande