COP-30 ನಿರ್ಧಾರಗಳಿಗೆ ಭಾರತ ಸ್ವಾಗತ
ಬೆಲೆಮ್, 23 ನವೆಂಬರ್ (ಹಿ.ಸ.) : ಆ್ಯಂಕರ್ : COP-30 ಸಮಾರೋಪ ಅಧಿವೇಶನದಲ್ಲಿ ಭಾರತವು ಹವಾಮಾನ ನ್ಯಾಯ ಮತ್ತು ಸಮಾನತೆ ಜಾಗತಿಕ ಹವಾಮಾನ ಚೌಕಟ್ಟಿನ ಕೇಂದ್ರೀಯ ಅಂಶವಾಗಬೇಕು ಎಂದು ಬಲವಾಗಿ ಒತ್ತಾಯಿಸಿದೆ. ಹವಾಮಾನ ಬಿಕ್ಕಟ್ಟಿಗೆ ಕಡಿಮೆ ಜವಾಬ್ದಾರಿ ಹೊಂದಿರುವ ರಾಷ್ಟ್ರಗಳ ಮೇಲೆ ಯಾವುದೇ ರೀತಿಯ ಹೆಚ್ಚುವರ
Welcome


ಬೆಲೆಮ್, 23 ನವೆಂಬರ್ (ಹಿ.ಸ.) :

ಆ್ಯಂಕರ್ : COP-30 ಸಮಾರೋಪ ಅಧಿವೇಶನದಲ್ಲಿ ಭಾರತವು ಹವಾಮಾನ ನ್ಯಾಯ ಮತ್ತು ಸಮಾನತೆ ಜಾಗತಿಕ ಹವಾಮಾನ ಚೌಕಟ್ಟಿನ ಕೇಂದ್ರೀಯ ಅಂಶವಾಗಬೇಕು ಎಂದು ಬಲವಾಗಿ ಒತ್ತಾಯಿಸಿದೆ. ಹವಾಮಾನ ಬಿಕ್ಕಟ್ಟಿಗೆ ಕಡಿಮೆ ಜವಾಬ್ದಾರಿ ಹೊಂದಿರುವ ರಾಷ್ಟ್ರಗಳ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಹೊರೆಯನ್ನು ಹಾಕಬಾರದು ಎಂದು ಭಾರತ ಸ್ಪಷ್ಟಪಡಿಸಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಕಾರ, COP-30 ಅಧ್ಯಕ್ಷತೆಯ ಸಮಗ್ರ ನಾಯಕತ್ವವನ್ನು ಭಾರತ ಶ್ಲಾಘಿಸಿದ್ದು, ಜಾಗತಿಕ ಹೊಂದಾಣಿಕೆಯ ಗುರಿ ಕುರಿತು ಕಂಡುಬಂದ ಪ್ರಗತಿಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಹತ್ವದ ಹೆಜ್ಜೆಯೆಂದು ಬಣ್ಣಿಸಿದೆ.

ಹವಾಮಾನ ಹಣಕಾಸಿನ ಕುರಿತಾಗಿ ಹಿಂದಿನಿಂದ ನೀಡಿರುವ ಭರವಸೆಗಳನ್ನು ಈಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈಡೇರಿಸಬೇಕಿದೆ ಎಂದು ಭಾರತ ನೆನಪಿಸಿದೆ. ವಿಶೇಷವಾಗಿ ಆರ್ಟಿಕಲ್ 9.1 ಅನ್ವಯ 33 ವರ್ಷಗಳ ಹಿಂದೆ ರಿಯೊನಲ್ಲಿ ನೀಡಿದ ಹವಾಮಾನ ಹಣಕಾಸಿನ ಬದ್ದತೆಯನ್ನು ತಕ್ಷಣ ಪಾಲಿಸಬೇಕು ಎಂದು ಭಾರತೀಯ ನಿಯೋಗ ಒತ್ತಾಯಿಸಿದೆ.

ಜಸ್ಟ್ ಟ್ರಾನ್ಸಿಷನ್ ಮೆಕ್ಯಾನಿಸಂ ಸ್ಥಾಪನೆಯನ್ನು COP-30 ಯ ಪ್ರಮುಖ ಸಾಧನೆಯೆಂದು ಭಾರತ ಸ್ವಾಗತಿಸಿದೆ. ಇದು ಜಾಗತಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಮಾನತೆ ಮತ್ತು ಹವಾಮಾನ ನ್ಯಾಯ ಕಾರ್ಯಗತಗೊಳಿಸಲು ನೆರವಾಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದೆ.

ಏಕಪಕ್ಷೀಯ ವ್ಯಾಪಾರ-ನಿರ್ಬಂಧಿತ ಹವಾಮಾನ ಕ್ರಮಗಳ ಕುರಿತು ಚರ್ಚೆಗೆ ಅವಕಾಶ ನೀಡಿದಕ್ಕಾಗಿ ಭಾರತ ಅಧ್ಯಕ್ಷತೆಯನ್ನು ಅಭಿನಂದಿಸಿದೆ. ಇಂತಹ ಕ್ರಮಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಕ್ಕೆ ಧಕ್ಕೆಯುಂಟುಮಾಡುತ್ತವೆ ಮತ್ತು ಸಮಾನತೆ ಹಾಗೂ ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳ ತತ್ವಗಳಿಗೆ ವಿರೋಧ ಎಂದೂ ಭಾರತ ಸ್ಪಷ್ಟಪಡಿಸಿದೆ.

ಹವಾಮಾನ ಹೊರಸೂಸುವಿಕೆ ಕಡಿತದ ಬಾಧ್ಯತೆಯನ್ನು ದುರ್ಬಲ ಮತ್ತು ಅಲ್ಪ ಜವಾಬ್ದಾರಿಯುತ ದೇಶಗಳ ಮೇಲೆ ಹಾಕುವುದು ತೀರಾ ಅನ್ಯಾಯಕರ ಎಂದು ಭಾರತ ಸೂಚಿಸಿದೆ. ಜಾಗತಿಕ ದಕ್ಷಿಣದ ದುರ್ಬಲ ಜನಸಂಖ್ಯೆಯನ್ನು ರಕ್ಷಿಸಲು ಹೆಚ್ಚಿನ ಅಂತರರಾಷ್ಟ್ರೀಯ ಸಹಕಾರ ಅತ್ಯವಶ್ಯಕ ಎಂದು ಭಾರತ ತನ್ನ ಸಂದೇಶದಲ್ಲಿ ಒತ್ತಿ ಹೇಳಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande