
ಕೋಲಾರ, ೨೩ ನವೆಂಬರ್ (ಹಿ.ಸ) :
ಆ್ಯಂಕರ್ : ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ರವರು ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿ ಸಮಸಮಾಜ ನಿರ್ಮಿಸಿದವರು. ಅವರ ವಚನಗಳು ಮತ್ತು ಅವರು ನಂಬಿದ್ದ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಸಮಸಮಾಜ ನಿರ್ಮಿಸಲು ಬಸವಣ್ಣನವರ ವಚನಗಳನ್ನು ಪಾಲಿಸಬೇಕಾಗಿದೆ. ಸಾಮಾಜದಲ್ಲಿ ತಾನೊಬ್ಬನೇ ಬೆಳೆಯುವುದನ್ನು ನೋಡುವುದಲ್ಲ. ನಮ್ಮೊಟ್ಟಿಗೆ ಇತರರನ್ನು ಕರೆದೆಯ್ಯೂವ ಕೆಲಸ ಆಗಬೇಕಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಚನ್ನಪ್ಪ ಅಭಿಪ್ರಾಯಪಟ್ಟರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಅಖಿತ ಭಾರತ ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಹಿಂದೆ ಶರಣರು ನವ ಸಮಾಜದ ನಿರ್ಮಾಣಕ್ಕಾಗಿ ರಚನೆ ಮಾಡಿರುವ ವಚನಗಳ ಪ್ರಚಾರ ಮಾಡುವ ಮೂಲಕ ವಚನಗಳ ಅರ್ಥವನ್ನು ಅರ್ಥೈಸಿಕೊಂಡಾಗ ಮಾತ್ರ ಸಮಾಜದ ಏಳಿಗೆ ಆಗುತ್ತದೆ. ಆ ನಿಟ್ಟಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕೆಲಸ ಮಾಡಿಕೊಂಡು ಬರುತ್ತಿದೆ. ಮುಂದೆಯೂ ಇನ್ನು ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮಾಡಿ ಯುವ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದರು.
ನಾವು ಮಾಡಿರುವ ಸಂಪತ್ತನ್ನು ನಮ್ಮೊಟ್ಟಿಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಅದೇ ರೀತಿ ಧಾನ ಧರ್ಮಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಅದರೆ ಮಾಡಿರುವ ಕೆಲಸಗಳು ಶಾಶ್ವತವಾಗಿ ಉಳಿದುಕೊಳ್ಳುತ್ತದೆ
ಶರಣ ಸಾಹಿತ್ಯ ಪರಿಷತ್ತಿನ್ನ ಮುಖ್ಯ ಉದ್ದೇಶಗಳನ್ನು ಕಾರ್ಯರೂಪಕ್ಕೆ ತಂದು ಜಾತಿ ಧರ್ಮ ಬೇದ ಬಿಟ್ಟು ಪರಿಷತ್ತಿನ ಮೂಲಧ್ಯೇಯಗಳನ್ನು ಸಮಾಜಕ್ಕೆ ತಲುಪಿಸಿ ಎಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಬಿ.ಸುರೇಶ್ ಮಾತನಾಡಿ ೧೨ನೇ ಶತಮಾನದಲ್ಲಿ ಶಿವ ಶರಣರು ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಜ್ಞಾನ ಸಂಪತ್ತು ಸಿಗುವಂತೆ ಮಾಡಬೇಕು. ಈಗಿನ ಕಾಲಘಟ್ಟದಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗಿದೆ. ಆರೋಗ್ಯಕರ ಬೆಳವಣಿಗೆಗೆ ಹೆಚ್ಚಾಗಿ ಶಾಲೆಗೊಂದು ಕಾರ್ಯಕ್ರಮ ಮಾಡುವ ಆಲೋಚನೆ ಇದೆ. ಹಾಗಾಗಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
ರಾಜ್ಯದಿಂದ ಕೋಲಾರದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಘಟಕಗಳ ಸಹಕಾರ ಅಗತ್ಯವಾಗಿ ಬೇಕಿದೆ. ಅಲ್ಲದೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದ ಸಮಿತಿ ರಚನೆ ಮಾಡಿ ಒಗ್ಗಟ್ಟಾಗಿ ಶರಣ ಸಾಹಿತ್ಯ ಪರಿಷತ್ತಿನ ಮೂಲಕ ಮನೆ ಮನೆ ವಚನ ಸಾಹಿತ್ಯಗಳನ್ನು ತಲುಪಿಸುವ ಕೆಲಸ ಮಾಡುವ ಆಲೋಚನೆ ಇದೆ. ಅದಕ್ಕಾಗಿ ತಾವೆಲ್ಲಾ ಕೈಗೊಜೋಡಿಸಬೇಕು ಎಂದರು.
ಪತ್ರಕರ್ತರಾದ ಕೆ.ಎಸ್ ಗಣೇಶ್ ಮಾತನಾಡಿ ಹೊಸ ಹೊಸ ಕನಸುಗಳನ್ನು ಕಾಣುವಂತ ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ಆಲೋಚನೆ ಇಟ್ಟುಕೊಂಡಿರುವ ಬಿ.ಸುರೇಶ್ ಅವರಿಗೆ ತಕ್ಕಂತೆ ಸ್ಥಾನ ಸಿಕ್ಕಿದೆ. ಅವರ ನೇತೃತ್ವದಲ್ಲಿ ಶರಣ ಸಾಹಿತ್ಯ ಪರಿಷತ್ತು ಒಳ್ಳೆಯ ಸಂಸ್ಥೆಯಾಗಿ ಬೆಳೆಯುತ್ತದೆ. ಪ್ರತಿ ಮನೆಗೂ ತತ್ವಗಳು ವಚನಗಳ ಸಾರವನ್ನು ಮನೆ ಮನೆ ಗೂ ತಲುಪಿಸುವ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ವಚನ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಮೂಲಕ ಒಳ್ಳೆಯ ರೀತಿಯಲ್ಲಿ ಷರಿಷತ್ತನ್ನು ಬೆಳೆಸುವ ಮೂಲಕ ಇಂದಿನ ಪೀಳಿಗೆಗೆ ವಚನಗಳನ್ನು ತಲುಪಿಸುವ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜೆಜೆ ನಾಗರಾಜ್ ಮಾತನಾಡಿ ಸ್ಥಾವರಕ್ಕೆ ಅಳಿವುಂಟು. ಜಂಗಮನಿಗೆ ಅಳಿವಿಲ್ಲ ಇದನ್ನು ಹೇಳಿದವರು ಬಸವಣ್ಣ. ವಚನ ಮಹಿಮೆ, ಷರಣ ಮಹಿಮೆಯನ್ನು ಮನೆ ಮನೆಗೆ ತಲುಪಿಸಬೇಕು ಎಂಬುವುದು ಜಂಗಮರ ಆಶಯವಾಗಿದೆ. ಇದೀಗ ವಚನ ಸಹಿತ್ಯದ ಮಹಿಮೆ ಜಾತಿಗೆ ಸೀಮಿತವಾಗಿ ಅದರ ಅರ್ಥವನ್ನೇ ಕಳೆದುಕೊಂಡಿರುವುದು ಬೇಸರ ಸಂಗತಿಯಾಗಿದೆ. ಜಂಗಮನ ಕೆಲಸವನ್ನು ಶರಣ ಸಾಹಿತ್ಯ ಪರಿಷತ್ ಮಾಡಬೇಕಿದೆ. ಶಾಲಾ ಕಾಲೇಜುಗಳಲ್ಲಿ ಅಕ್ಕಮಹಾದೇವಿ ಬಸವಣ್ಣ ನವರು ರಚನೆ ಮಾಡಿರುವ ವಚನಗಳನ್ನು ಅರ್ಥೈಸುವುದಾಗಿದೆ ಎಂದು ವಿವರಿಸಿದರು.
ಕದಲಿ ಮಹಿಳಾ ಸಂಸ್ಥೆಯ ಜಿಲ್ಲಾಧ್ಯಕ್ಷೆ ಮಾಯಾ ಬಾಲಚಂದ್ರ ಮಾತನಾಡಿ ನಮಗೆ ಸಿಕ್ಕ ಅವಕಾಶವನ್ನು ಅಧಿಕಾರ ಎಂದು ಭಾವಿಸದೇ ಇದೊಂದು ಜವಾಬ್ದಾರಿ ಎಂದು ಭಾವಿಸಿದಾಗ ಮಾತ್ರ ಜಯ ಸಿಗಲು ಸಾಧ್ಯ, ಎಲ್ಲರ ಮನೋಭಾವದನ್ನು ಇದನ್ನು ಅಳವಡಿಸಿಕೊಳ್ಳಬೇಕಿದೆ. ಮುಂದಿನ ಪೀಳೀಗೆಗೆ ವಚನ ಸಹಿತ್ಯಗಳನ್ನು ತಲುಪಿಸುವ ಸಲುವಾಗಿ ಕದಲಿ ಮಹಿಳಾ ಸಂಸ್ಥೆಯಲ್ಲಿ ಹೆಚ್ಚಿನವರನ್ನು ಶಿಕ್ಷಕರನ್ನು ಸೇರ್ಪಡೆಗೊಳಿಸಿಕೊಳ್ಳಲಾಗಿದೆ ಮೊದಲಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರು ಹಿನ್ನಡೆಯಾಗಿದೆ ಎಂದರು.
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಮಾಡಲು ಕಡಿವಾಣ ಬಿದ್ದಿದೆ. ಇದರಿಂದ ನಿರಾಶರಾಗದೇ ಖಾಸಗೀ ಸಂಸ್ಥೆಗಳು ಇದ್ದು ಇದರ ಜೊತೆಗೆ ಮಹಿಳಾ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ವಚನ ಸಾಹಿತ್ಯ ಒಂದು ಸಮುದಾಯಕ್ಕೆ ಮೀಸಲಾಗಬಾರದು. ಹಿಂದಿನ ಕಾಲ ಘಟ್ಟದಲ್ಲಿ ಹಾಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವ ಸಲುವಾಗಿ ವಚನ ಸಾಹಿತ್ಯಗಳನ್ನು ರಚನೆ ಮಾಡಿದ್ದಾರೆ. ಅವರ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲಾ ಹೋಗಬೇಕಾಗಿದೆ ಎಂದರು.
ಬಂಗಾರಪೇಟೆ ಉಮೇಶ್, ಮಂಜುನಾಥ್ ರೈತ ಸಂಘದ ಹೋರಾಟಗಾರ ವೀರಭದ್ರಸ್ವಾಮಿ. ಮುಳಬಾಗಿಲು ಶಿವಕುಮಾರ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆಜಿಎಫ್ ಶೇಕರಪ್ಪ, ಕಳ್ಳಿಪುರ ನಟರಾಜ್, ಸಚ್ಚಿದಾನಂದ, ಕೆಬಿ ಜಗದೀಶ್ ಚಿನ್ಮಯ ವಿದ್ಯಾಲಯ ಪ್ರಾಂಶುಪಾಲ.ಪ್ರಾAಶುಪಾಲ ಆರ್ ಸಿ ಮಂಜುನಾಥ್, ದೇವರಾಜ್ ಮಂಜುನಾಥ್, ಸತೀಶ್ ಮಹಾಶೆಟ್ಟಿ. ಕೆ.ಸಿ ಉಮೇಶ್ ಕುಮಾರ್ ಮಂಜುನಾಥ್ ವಿಜಯ್ ನರಸಾಪುರದ ಲೋಕೇಶ್ ಚಂದ್ರಶೇಖರ ಪ್ರಸ್ಸನ್ನ ಬಸವರಾಜ್, ಕೋಲಾರದ ಚಿಕ್ಕದೇವರಾಜ್ ವಿನಯ್ ಆನಂದ್ ಮಂಜು, ಸ್ವಾಮಿ ವಿವೇಕನಂದ ಯುವ ವೇದಿಕೆ ಸದಸ್ಯರು ಭಾಗವಹಿಸಿದ್ದರು.
ಚಿತ್ರ : ಕೋಲಾರದಲ್ಲಿ ಭಾನುವಾರ ಶರಣ ಸಾಹಿತ್ಯ ಪರಿಷತ್ ಸಭೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್