

ಕೊಪ್ಪಳ, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಪೇ ಬ್ಯಾಕ್ ಟು ಮೋಚಿ ಸೋಸಾಯಿಟಿ ಎಜುಕೇಷನಲ್ ಟ್ರಸ್ಟ್‍ನಿಂದ ಸಮಾಜ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಹಿಸುವ ಉದ್ದೇಶದಿಂದ ನ.23 ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2ನೇ ಹಂತದ ಪ್ರೋತ್ಸಾಹಧನ ವಿತರಣೆ ಸಮಾರಂಭ ಹಮ್ಮಿಕೊಂಡಿದೆ ಎಂದು ಟ್ರಸ್ಟ್ ಅಧ್ಯಕ್ಷ ರಮೇಶ ಕೋಳೂರ ಅವರು ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಲಡಾಯಿ ಪ್ರಕಾಶನದ ಸಂಪಾದಕ ಬಸವರಾಜ ಸೂಳಿಬಾವಿ ಅವರು ಉದ್ಘಾಟಿಸುವರು.
ಗಣ್ಯರಾದ ಬಿ.ಎಸ್.ಮದಕಟ್ಟಿ ಅವರು ಗೌರವ ಅಧ್ಯಕ್ಷತೆ ವಹಿಸಲಿದ್ದು, ನಾನು ಅಧ್ಯಕ್ಷತೆ ವಹಿಸುವೆ. ಮುಖ್ಯ ಅತಿಥಿಗಳಾದ ಸಿದ್ದಪ್ಪ, ದಾನಪ್ಪ ಕವಲೂರು, ಡಾ.ಸೋಮಕ್ಕ, ನಾಗಮ್ಮ ಹಾಲಿನವರ, ಜ್ಯೋತಿ ಬ್ಯಾಹಟ್ಟಿ ಅವರು ಉಪಸ್ಥಿತರಿರಲಿದ್ದಾರೆ. ಜನಪ್ರತಿನಿಧಿಗಳು ನಮ್ಮ ಸಮಾಜದ ಜನರ ಧ್ವನಿಯಾಗಲು ಮನವಿ ಮಾಡಿದರು.
ಸಮಾಜದ ಮುಖಂಡ ದಾನಪ್ಪ ಕವಲೂರು ಮಾತನಾಡಿ, ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವುದು .ಸಮಾಜದ ಜವಬ್ದಾರಿಯಾಗಿದೆ. ಹಾಗಾಗಿ ಪ್ರತಿಭಾವಂತರಿಗೆ ಶಾಲಾ-ಕಾಲೇಜುಗಳಲ್ಲಿ ಶುಲ್ಕ ಪಾವತಿಸಲು ಆಗದೇ ಇರುವಂತ ಹಾಗೂ ಅನಾಥ, ತಂದೆ-ತಾಯಿ ಇಲ್ಲದ ಮಕ್ಕಳನ್ನು ಗುರುತಿಸಿ ಸಮಾಜದ ಟ್ರಸ್ಟ್ ವತಿಯಿಂದ ಅವರಿಗೆ ಮಾಸಿಕ ಪ್ರೋತ್ಸಾಹ ಧನ ರೂಪದಲ್ಲಿ ಆರ್ಥಿಕ ನೆರವು ನೀಡಲಿದ್ದೇವೆ. ಇದೊಂದು ಸಮಾಜ ಸೇವೆಯಾಗಿದ್ದು ಎಲ್ಲರೂ ಸಹಕಾರ ಕೊಡಬೇಕು ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಮೋಚಿ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷ ಮಂಜುನಾಥ ಬಂಡಿ, ಯಲ್ಲಪ್ಪ ಕೋಳೂರು, ಹನುಮಂತ ಸಾಲಿ, ಫಕೀರಪ್ಪ ಹಾದಿಮನಿ, ಮಂಜುನಾಥ ಕೋಳೂರು, ತಿಪ್ಪಣ್ಣ ಹಾದಿಮನಿ ಅವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್