
ನವದೆಹಲಿ, 23 ನವೆಂಬರ್ (ಹಿ.ಸ.) :
ಆ್ಯಂಕರ್ : ದೇಶವ್ಯಾಪಿ ಆನ್‌ಲೈನ್ ಹೂಡಿಕೆ ವಂಚನೆ ಪ್ರಕರಣದಲ್ಲಿ 5.92 ಕೋಟಿ ರೂಪಾಯಿ ಮೋಸದ ಜಾಲವನ್ನು ದೆಹಲಿ ಕ್ರೈಂ ಬ್ರಾಂಚ್ ಸೈಬರ್ ಸೇಲ್ ಭೇದಿಸಿದ್ದು. ಪ್ರಮುಖ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದ್ದು, ಇವರ ಖಾತೆಗಳಲ್ಲಿ 1.1 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಹಿವಾಟು ಪತ್ತೆಯಾಗಿದೆ.
ವ್ಯಕ್ತಿಯೋರ್ವನಿಗೆ ಫೇಸ್‌ಬುಕ್ ಮೂಲಕ ‘ಮುಂಬೈ ಗ್ಲೋಬಲ್ ಟ್ರೇಡರ್ಸ್’ ಕಂಪನಿಯ ಅಧಿಕಾರಿ ಎಂದು ಪರಿಚಯಿಸಿಕೊಂಡ ಮಹಿಳೆ, ಎರಡು ತಿಂಗಳಲ್ಲಿ “ಹೈ-ರಿಟರ್ನ್ ಟ್ರೇಡಿಂಗ್” ಹೆಸರಿನಲ್ಲಿ 5.92 ಕೋಟಿ ರೂ. ಹೂಡಿಕೆ ಮಾಡಿಸಿಸಿ ವಂಚಿಸಿದ್ದಾಗಿ ದೂರು ನೀಡಲಾಗಿತ್ತು.
ತನಿಖೆಯಲ್ಲಿ, ವಂಚಿತ ಹಣವನ್ನು 33 ವಿಭಿನ್ನ ಬ್ಯಾಂಕ್ ಖಾತೆಗಳ ಮೂಲಕ ಹಲವು ಪದರಗಳಲ್ಲಿ ವರ್ಗಾವಣೆ ಮಾಡಿ ಮಣಿ-ಲ್ಯಾಂಡರಿಂಗ್ ಮಾಡಿರುವುದು ಬಹಿರಂಗವಾಗಿದೆ. ಅನಸ್ ಅಂಸಾರಿ (22), ಮೊಹಮದ್ ಕೈಫ್ (22), ಅಕಿಬ್ (40) ಮತ್ತು ಮೊಹಮ್ಮದ ದಾನಿಷ್ (22) ಬಂಧಿತರಾಗಿದ್ದು, ಎಲ್ಲರೂ ಉತ್ತರಾಖಂಡ್‌ನ ಹಲ್ದ್ವಾನಿ ಮೂಲದವರಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa