
ಹಾಸನ, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20ರ ಅವಧಿಯಲ್ಲಿ ವಾಹನಗಳ ಮೇಲೆ ದಾಖಲಾಗಿರುವ ಪ್ರಕರಣಗಳ ದಂಡ ಮೊತ್ತದ ಶೇ.50 ರಷ್ಟನ್ನು ಪಾವತಿಸಿ ಮುಕ್ತಾಯಗೊಳಿಸಿಕೊಳ್ಳಲು ದಿನಾಂಕ 12-12-2025ರವರೆಗೆ ಕಾಲಾವಕಾಶ ನೀಡಿ ಆದೇಶಿಸಿದೆ. ಆದುದರಿಂದ ಹಾಸನ ಜಿಲ್ಲೆಯ ವಾಹನಗಳ ಮಾಲೀಕರು 1991ರಿಂದ 2020ರವರೆಗೆ ಪ್ರಾದೇಶಿಕ ಸಾರಿಗೆ ಕಚೇರಿ, ಹಾಸನ, ವತಿಯಿಂದ ದಾಖಲಾಗಿರುವ ಪ್ರಕರಣಗಳನ್ನು ಶೇ.50 ರಷ್ಟು ಮಾತ್ರ ದಂಡ ಪಾವತಿಸಿ ಮುಕ್ತಾಯಗೊಳಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa